ದಾವಣಗೆರೆ : ಕರ್ನಾಟಕ ಸರ್ಕಾರದಿಂದ ರಾಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದ್ದು, ಇದೀಗ ಜಾತಿ ಸಮೀಕ್ಷೆಗೆ ಗೈರಾಗಿದ್ದ ದಾವಣಗೆರೆಯ ಮೂವರು ಸರ್ಕಾರಿ ನೌಕರರಿಗೆ ಜಿಲ್ಲಾಡಳಿತ ಬಿಗ್ ಶಾಕ್ ನೀಡಿದೆ.

ಸಮೀಕ್ಷಾ ಕಾರ್ಯಕ್ಕೆ ನಿರಾಸಕ್ತಿ ತೋರಿದ ಪರಿಣಾಮ ಇಬ್ಬರು ಶಿಕ್ಷಕರು, ಓರ್ವ ಹಾಸ್ಟೆಲ್ ವಾರ್ಡನ್ನ್ನು ಅಮಾನತು ಮಾಡಲಾಗಿದೆ. ಜಮಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಂಜುನಾಥ ಡಿ.ಕೆ, ನಾಗನೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಬಸವರಾಜಪ್ಪ ಹೆಚ್ ಹಾಗೂ ಮಾಯಾಕೊಂಡದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ದುರ್ಗಪ್ಪ ಕೆ.ಆರ್ ಅವರನ್ನು ಅಮಾನತು ಮಾಡಿ ದಾವಣಗೆರೆ ಡಿಸಿ ಗಂಗಾಧರಸ್ವಾಮಿ ಆದೇಶ ಹೊರಡಿಸಿದ್ದಾರೆ.

1957ರ ನಿಯಮ 10(1)(d) ಅನ್ವಯ ಸೇವೆಯಿಂದ ಅಮಾನತುಗೊಳಿಸಿ ಡಿಸಿ ಆದೇಶ ನೀಡಿದ್ದಾರೆ. ಸಮೀಕ್ಷಾ ಕಾರ್ಯಕ್ಕೆ ಗೈರಾಗಿದ್ದಕ್ಕೆ ಕಾರಣ ಕೇಳಿ ಜಿಲ್ಲಾಡಳಿತ ನೋಟಿಸ್ ಕೊಟ್ಟಿತ್ತು, ಅದಕ್ಕೆ ಉತ್ತರ ನೀಡದೇ, ಸರ್ಕಾರದ ಸಮೀಕ್ಷೆಗೆ ಗೈರಾಗಿದ್ದ ಮೂವರು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.


ಇದನ್ನೂ ಓದಿ : ಜೈಲು ಪಾಲಾಗಿರುವ ದರ್ಶನ್ ಮೇಲೆ ಹದ್ದಿನ ಕಣ್ಣು.. ಪರಪ್ಪನ ಅಗ್ರಹಾರಕ್ಕೆ ADGP ಬಿ. ದಯಾನಂದ್ ಭೇಟಿ, ಖಡಕ್ ಎಚ್ಚರಿಕೆ!







