ಪ್ರಧಾನಿ ನರೇಂದ್ರ ಮೋದಿಗೆ ಇಂದು 75ನೇ ಹುಟ್ಟುಹಬ್ಬದ ಸಂಭ್ರಮ.. ಗಣ್ಯಾತಿಗಣ್ಯರಿಂದ ಶುಭಾಶಯಗಳ ಸುರಿಮಳೆ!

ನವದೆಹಲಿ : ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಇಂದು (ಸೆ.17) 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈಗಾಗ್ಲೇ ಪ್ರಧಾನಿ ಮೋದಿಯ ಹುಟ್ಟುಹಬ್ಬ ಆಚರಣೆಗೆ ದೇಶದೆಲ್ಲೆಡೆ ಸಿದ್ಧತೆಗಳನ್ನು ಮಾಡಲಾಗಿದ್ದು, ಅಭಿಮಾನಿಗಳು ಅರ್ಥಪೂರ್ಣವಾಗಿ ತಮ್ಮ ನಾಯಕನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಭರ್ಜರಿ ಪ್ಲ್ಯಾನ್​​ಗಳನ್ನು ಮಾಡಿಕೊಂಡಿದ್ದಾರೆ.

ಇಂದು ಮಧ್ಯಪ್ರದೇಶದ ಧಾರ್‌ನಲ್ಲಿ ಮೆಗಾ ಜವಳಿ ಉದ್ಯಾನವನವನ್ನು ಉದ್ಘಾಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ನರೇಂದ್ರ ಮೋದಿಯವರಿಗೆ ಗಣ್ಯಾತಿಗಣ್ಯರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೇ ವಿಶ್ವ ಮೆಚ್ಚಿದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಖ್ಯಾತಿ ಗಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಸೇರಿ ವಿಶ್ವ ನಾಯಕರು ಪ್ರಧಾನಿ ಮೋದಿ ಅವರಿಗೆ ಬರ್ತ್​ಡೇ ವಿಶ್​ ಮಾಡಿದ್ದಾರೆ.

ಇನ್ನು ಪ್ರತಿ ವರ್ಷದಂತೆ ಈ ಬಾರಿ ಕೂಡ ಭಾರತೀಯ ಜನತಾ ಪಕ್ಷವು ಮೋದಿ ಅವರ ಜನ್ಮದಿನವನ್ನು ದೇಶಾದ್ಯಂತ ‘ಸೇವಾ ಪಖ್ವಾಡ’ ಎಂದು ಕರೆಯುವ ಎರಡು ವಾರಗಳ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೆಹಲಿ ಸರ್ಕಾರವು 75 ಡ್ರೋನ್‌ಗಳ ಪ್ರದರ್ಶನವನ್ನು ಆಯೋಜಿಸಿದೆ. ಇಂದು ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಈ ಡ್ರೋನ್‌ ಶೋ ನಡೆಯಲಿದೆ.

ಹಾಗೆಯೇ ‘ಸೇವಾ ಪಖ್ವಾಡ’ ಅಭಿಯಾನದ ಭಾಗವಾಗ ದೆಹಲಿ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಆರಂಭಿಸಲು ಸಿದ್ಧವಾಗಿದೆ. ಸಾರ್ವಜನಿಕರಿಗಾಗಿ ಅಂಗಾಂಗ ಕಸಿ ಜಾಗೃತಿ ಪೋರ್ಟಲ್, ಅಂತರರಾಜ್ಯ ಬಸ್ ಸೇವೆಗಳು ಮತ್ತು 100 ಹೊಸ ಬಸ್‌ಗಳ ಸೇರ್ಪಡೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ.

ಇದನ್ನೂ ಓದಿ : ಮುಡಾ ಹಗರಣ ಕೇಸಲ್ಲಿ ಮಹತ್ವದ ಬೆಳವಣಿಗೆ.. ಮಾಜಿ ಆಯುಕ್ತ ಜಿ.ಟಿ ದಿನೇಶ್‌ ಕುಮಾರ್ ಬಂಧನ!

Btv Kannada
Author: Btv Kannada

Read More