ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ್ ಸಂಪಗಾವಿ ವಿರುದ್ಧ ನ್ಯಾಯ ಕೇಳಲು ಬಂದ ವೃದ್ದೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ತನ್ನ ಪಾಲಿಗೆ ಸ್ವಲ್ಪ ಜಮೀನು ನೀಡುವಂತೆ ಮನವಿ ಮಾಡಿಕೊಳ್ಳಲು ಬಂದಿದ್ದ ಅಜ್ಜಿಗೆ ಅಸಿಸ್ಟಂಟ್ ಕಮಿಷನರ್ ಸುಭಾಷ್ ನಡೀ.. ಎದ್ದು ಹೋಗು.. ಎಂದು ಗದರಿದ್ದಾರೆ ಎಂಬ ಆರೋಪವಿದೆ.

ವೃದ್ದೆಯ ಮನವಿ ಕೇಳದೇ, ಇಲ್ಲೇನು ಪರಾಳ (ಅಲ್ಪೋಪಹಾರ) ಮಾಡಲು ಬಂದಿದ್ಯಾ.. ಎದ್ದು ಹೋಗು ಎಂದು AC ಸುಭಾಷ್ ಸಂಪಗಾವಿ ಧಿಮಾಕಿನಿಂದ ವರ್ತಿಸಿದ್ದಾರೆ ಎನ್ನಲಾಗುತ್ತಿದೆ. ಹಿರಿಜೀವ ಎಂದು ನೋಡದೇ ದರ್ಪ ತೋರಿದ AC ಸುಭಾಷ್ ಸಂಪಗಾವಿ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾನವೀಯತೆ ತೋರದ ಚಿಕ್ಕೋಡಿ AC ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಿಮ್ಮ ಅಧಿಕಾರ ಬಹಳ ದಿನ ಇರಲ್ಲ, ಹಿರಿಯರಿಗೆ ಗೌರವ ಕೊಡಿ ಎಂದು ನೆಟ್ಟಿಗರ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ‘ಬೆಂಗಳೂರು ಸಿನಿ ಕ್ರಿಯೇಶನ್ಸ್’ ಸಂಸ್ಥೆಯ ನೂತನ ಶಾಖೆ ಉದ್ಘಾಟಿಸಿದ ನಟ ನವೀನ್ ಶಂಕರ್!







