‘ಬೆಂಗಳೂರು ಸಿನಿ ಕ್ರಿಯೇಶನ್ಸ್‌’ ಸಂಸ್ಥೆಯ ನೂತನ ಶಾಖೆ ಉದ್ಘಾಟಿಸಿದ ನಟ ನವೀನ್‌ ಶಂಕರ್‌!

ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಣ, ಸಂಕಲನ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ತರಬೇತಿ ನೀಡುವ ʼಬೆಂಗಳೂರು ಸಿನಿ ಕ್ರಿಯೇಶನ್ಸ್‌ʼ ಸಂಸ್ಥೆಯ ನೂತನ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಸಿಲಿಕಾನ್ ಸಿಟಿಯ ವಿಜಯನಗರದಲ್ಲಿ ಆರಂಭವಾಗಿರುವ ʼಬೆಂಗಳೂರು ಸಿನಿ ಕ್ರಿಯೇಶನ್ಸ್‌ʼ ಸಂಸ್ಥೆಯ ನೂತನ ಶಾಖೆಯನ್ನು ನಟ ನವೀನ್‌ ಶಂಕರ್‌, ಛಾಯಾಗ್ರಹಕ ಮತ್ತು ಸಂಕಲನಕಾರ ಕ್ರೇಜಿಮೈಂಡ್ಸ್‌ ಶ್ರೀ ಮತ್ತು ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಉದ್ಘಾಟಿಸಿ, ಸಂಸ್ಥೆಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ʼಬೆಂಗಳೂರು ಸಿನಿ ಕ್ರಿಯೇಶನ್ಸ್‌ʼ ಸಂಸ್ಥೆಯ ಸಂಸ್ಥಾಪಕ ಸದ್ಧು ದಢೇದ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಮತ್ತು ʼಬೆಂಗಳೂರು ಸಿನಿ ಕ್ರಿಯೇಶನ್ಸ್‌ʼ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.

ಇನ್ನು ಹೊಸದಾಗಿ ಆರಂಭವಾಗಿರುವ ʼಬೆಂಗಳೂರು ಸಿನಿ ಕ್ರಿಯೇಶನ್ಸ್‌ʼ ಸಂಸ್ಥೆಯ ಶಾಖೆಯಲ್ಲಿ ಛಾಯಾಗ್ರಹಣ, ವೆಡ್ಡಿಂಗ್‌ ಪೋಟೋಗ್ರಫಿ, ಸಂಕಲನ, ಕಲರಿಂಗ್‌ ಹೀಗೆ ಸಿನಿಮಾ ಮೇಕಿಂಗ್‌ಗೆ ಬೇಕಾದ ತಾಂತ್ರಿಕ ಕಾರ್ಯಗಳನ್ನು ಕನ್ನಡ ಭಾಷೆಯಲ್ಲೇ ಕಲಿಸಲಾಗುತ್ತಿದ್ದು, ಚಿತ್ರರಂಗದ ಅನೇಕ ಅನುಭವಿ ತಂತ್ರಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸಿನಿಮಾ ಮೇಕಿಂಗ್‌ ಕುರಿತು ತಾಂತ್ರಿಕ ತರಬೇತಿ ನೀಡಲಿದ್ದಾರೆ.

ಇದನ್ನೂ ಓದಿ : ಎಂಟು ವರ್ಷದ ಬಳಿಕ ಬೆಳ್ಳಿ ತೆರೆಗೆ ಅಮೂಲ್ಯ ಕಂಬ್ಯಾಕ್‌ – ಗೋಲ್ಡನ್‌ಕ್ವೀನ್‌ ರೀ ಎಂಟ್ರಿಗೆ ಸಿನಿಮಾ ಟೀಸರ್‌ ಔಟ್!

Btv Kannada
Author: Btv Kannada

Read More