ಟೀ ಚೆನ್ನಾಗಿಲ್ಲ ಅಂದಿದಕ್ಕೆ BMTC ಚಾಲಕನ ಮೇಲೆ ಹಲ್ಲೆ.. ಆರೋಪಿ ಅರೆಸ್ಟ್​​!

ಬೆಂಗಳೂರು : ಕೇವಲ ಟೀ ಚೆನ್ನಾಗಿಲ್ಲ ಅಂದಿದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಅಂಗಡಿ ಕೆಲಸಗಾರ ಹಲ್ಲೆ ಮಾಡಿರುವ ಘಟನೆ ಮೆಜೆಸ್ಟಿಕ್ ಶಾಪ್ ನಂಬರ್ 21ರಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಿಎಂಟಿಸಿ ಚಾಲಕನನ್ನು ಮೂಗಪ್ಪ ಎಂದು ಗುರುತಿಸಲಾಗಿದೆ.

ಮೂಗಪ್ಪನ ಜೊತೆ ಬಂದಿದ್ದ ಮತ್ತೊಬ್ಬ ಅಂಗಡಿಯಲ್ಲಿ ಟೀ ಆರ್ಡರ್ ಮಾಡಿದ್ದ. ಈ ವೇಳೆ ಮೂಗಪ್ಪ ಈ ಅಂಗಡಿಯಲ್ಲಿ ಟೀ ಚೆನ್ನಾಗಿಲ್ಲ, ಬೇರೆ ಅಂಗಡಿಗೆ ಹೋಗೋಣ ಬಾ ಎಂದಿದ್ದ. ಮೂಗಪ್ಪನ ಮಾತಿಗೆ ಕೋಪಗೊಂಡು ಅಂಗಡಿ ಕೆಲಸಗಾರ ಗುರುರಾಜ್ ಎಂಬಾತ ಹೊರಬಂದು ಮೂಗಪ್ಪನ ಏಕಾಏಕಿ ಹಲ್ಲೆ ಮಾಡಿದ್ದಾನೆ.

ಆರೋಪಿ ಗುರುರಾಜ್
ಆರೋಪಿ ಗುರುರಾಜ್

ಸದ್ಯ ಘಟನೆ ಸಂಬಂಧಿಸಿದಂತೆ  ಹಲ್ಲೆ ಮಾಡಿದ ಗುರುರಾಜ್​ನನ್ನು ಉಪ್ಪಾರ್​ಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಗುರುರಾಜ್, ಏಳು ತಿಂಗಳಿಂದ ಮೆಜೆಸ್ಟಿಕ್ ನ ಟೀ ಅಂಗಡಿಯಲ್ಲಿ‌ ಕೆಲಸ ಮಾಡ್ತಾ ಇದ್ದ. ಇನ್ನು ಮೂಗಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತುದ್ದಾರೆ.

ಇದನ್ನೂ ಓದಿ : ಇಂಡಸ್ ಬ್ಯಾಂಕ್​​​ ಸಿಬ್ಬಂದಿ ಕಿರುಕುಳ ಆರೋಪ – ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ!

Btv Kannada
Author: Btv Kannada

Read More