ಬೆಂಗಳೂರು : ಇಂಡಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ವ್ಯಕ್ತಿಯೋರ್ವ ಸೂಸೈಡ್ ಮಾಡಿಕೊಂಡ ಘಟನೆ ಬಾಗಲಕೋಟೆಯ ನವನಗರದ 2ನೇ ಸೆಕ್ಟರ್ನಲ್ಲಿ ನಡೆದಿದೆ. 41 ವರ್ಷದ ದಾದಾ ಹಯಾತ್ ಕೊರ್ತಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಬಾಗಲಕೋಟೆಯ ನವನಗರದ 2ನೇ ಸೆಕ್ಟರ್ನ ಮನೆಯಲ್ಲಿ ದಾದಾ ಹಯಾತ್ ಕೊರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿ ಬಾಯಿ ಕಾನ್ಸರ್ನಿಂದ ಬಳಲುತ್ತಿದ್ದರು. ಹೀಗಾಗಿ ಕಾನ್ಸರ್ ಚಿಕಿತ್ಸೆಗೆಂದು ಇಂಡಸ್ ಲ್ಯಾಂಡ್ ಮಹಿಳಾ ಸಂಘದಿಂದ ಸಾಲ ಪಡೆದಿದ್ದರು.
ಸಾಲ ಮರುಪಾವತಿಗಾಗಿ ಇಂಡಸ್ ಬ್ಯಾಂಕ್ ಸಿಬ್ಬಂದಿಯಿಂದ ಪದೇ ಪದೇ ಕಿರುಕುಳದ ಆರೋಪ ಕೇಳಿಬಂದಿದೆ. ಇನ್ನು ನಿನ್ನೆಯೂ ಬ್ಯಾಂಕ್ ಸಿಬ್ಬಂದಿ ಲೋನ್ ರಿಕವರಿಗಾಗಿ ಬಂದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದರು ಎನ್ನಲಾಗಿದೆ. ಕಿರುಕುಳ ತಾಳಲಾರದೇ ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ‘ಬಿಗ್ಬಾಸ್ ಕನ್ನಡ’ ಕೇವಲ ರಿಯಾಲಿಟಿ ಶೋ ಅಲ್ಲ, ಸಾಂಸ್ಕೃತಿಕ ಶಕ್ತಿ ಕೇಂದ್ರ : ಜಿಯೋಸ್ಟಾರ್ ಸೌತ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ!







