ಬೆಂಗಳೂರು : ಅಂತರರಾಷ್ಟ್ರೀಯ ಮೈಗ್ರೇನ್ ಆಕ್ಷನ್ ದಿನಾಚರಣೆ ಪ್ರಯುಕ್ತ ಇಂದು ಬೆಂಗಳೂರಿನ ಪ್ರತಿಷ್ಠಿತ ವೆಂಕಟ್ ಸೆಂಟರ್ ಫಾರ್ ಅಸ್ಕೆಟಿಕ್ ಹೆಲ್ತ್ ಸಂಸ್ಥೆಯಲ್ಲಿ ಭಾರತದ ಮೊದಲ ಮೈಗ್ರೇನ್ ಶಸ್ತ್ರಚಿಕಿತ್ಸೆ ಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಈ ಬಗ್ಗೆ ಖ್ಯಾತ ವೈದ್ಯರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಡಾ. ಅನಿಕೇತ್ ವೆಂಕಟರಾಮ್, ಕನ್‌ಸಲ್ಮಂಟ್ ಪ್ಲಾಸ್ಟಿಕ್ ಸರ್ಜನ್ ಮತ್ತು ಡೈರೆಕ್ಟರ್, ವೆಂಕಟ್ ಸೆಂಟರ್ ಅವರು ಭಾರತದಲ್ಲಿ ಮೊದಲ ಬಾರಿಗೆ ಮೈಗ್ರೇನ್ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಿದ್ದು, ಔಷಧಿ, ಇಂಜೆಕ್ಷನ್‌ಗಳಿಂದ ಪರಿಹಾರ ದೊರೆಯದ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆ ಹೊಸ ಆಶಾಕಿರಣವಾಗಿದೆ.
ಕಾರ್ಯಕ್ರಮದಲ್ಲಿ ಮೈಗ್ರೇನ್ ಶಸ್ತ್ರಚಿಕಿತ್ಸೆಯ ಭಾರತೀಯ ಪಯೋನಿಯರ್ ಡಾ. ಅನಿಕೇತ್ ವೆಂಕಟರಾಮ್‌ರವರು ಉಪನ್ಯಾಸ ನೀಡಿದ್ದು, ನೈಜ ರೋಗಿಗಳ ಯಶಸ್ಸಿನ ಅನುಭವ ಹಂಚಿಕೊಂಡಿದ್ದಾರೆ. ಡಾ. ಅನಿಕೇತ್ ವೆಂಕಟರಾಮ್‌ರವರು ಮೈಗ್ರೇನ್ ರೋಗಿಗಳಿಗೆ ಉಚಿತ ಸಲಹೆ ನೀಡಿದ್ದಾರೆ.

ಭಾರತದಲ್ಲಿ ಲಕ್ಷಾಂತರ ಜನರನ್ನು ಮೈಗ್ರೇನ್ ತೊಂದರೆ ಪೀಡಿಸುತ್ತಿದ್ದರೂ, ಉನ್ನತ ಮಟ್ಟದ ಚಿಕಿತ್ಸೆ ಕುರಿತು ಜಾಗೃತಿ ಇನ್ನೂ ಕಡಿಮೆ ಇದೆ. ಮೈಗ್ರೇನ್ ಶಸ್ತ್ರಚಿಕಿತ್ಸೆ ಡೇ-ಕೇರ್ (Day-care) ವಿಧಾನವಾಗಿದ್ದು, ತ್ವಚೆಯ ಮಟ್ಟದಲ್ಲಿ ಸಣ್ಣ ಚಿರಾಯಗಳನ್ನು ಮಾಡಿ ಮಾಡಲಾಗುತ್ತದೆ. ಇದು ಬ್ರೌನ್ ಸರ್ಜರಿ ಅಲ್ಲ. ಬದಲಾಗಿ ಮುಖದ ಕೆಲವು ವಿಶೇಷ ಟ್ರಿಗರ್ ಪಾಯಿಂಟ್‌ಗಳ ಮೇಲೆ ಇರುವ ಒತ್ತಡವನ್ನು ನಿವಾರಿಸಲು ಬಳಸುವ ನಿಖರ ತಂತ್ರಜ್ಞಾನ. ಈ ವಿಧಾನ ಸುರಕ್ಷಿತ, ಕನಿಷ್ಠ ಹಸ್ತಕ್ಷೇಪದ, ಮತ್ತು 90% ಕ್ಕೂ ಹೆಚ್ಚು ಪರಿಣಾಮಕಾರಿತ್ವವನ್ನು ತೋರಿಸಿದೆ. ಹಾಗಾಗಿ ಈ ಕಾರ್ಯಕ್ರಮವು ಮೈಗ್ರೇನ್ ಪೀಡಿತರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಕ್ರಾಂತಿಕಾರಿ ಚಿಕಿತ್ಸೆಯ ಕುರಿತು ಮಹತ್ವದ ತಿಳಿವು ನೀಡಿದೆ.
ಇದನ್ನೂ ಓದಿ : ಹೆಂಡತಿ, ಮಕ್ಕಳು ಬಿಟ್ಟು ಹೋಗಿದ್ದಕ್ಕೆ ನದಿಗೆ ಹಾರಿದ ಪತಿ – ದೃಶ್ಯ ಮೊಬೈಲ್‌ನಲ್ಲಿ ಸೆರೆ!







