ಬೆಂಗಳೂರು : ಸಾಮಾಜಿಕ ಆರ್ಥಿಕ ಸಮೀಕ್ಷೆಯ ಜಾತಿ ಗಣತಿ ವರದಿ ಕರ್ನಾಟಕದಲ್ಲಿ ಕಿಚ್ಚು ಹೊತ್ತಿಸಿದೆ. ಇದೀಗ ಹೈಕಮಾಂಡ್ ಸಲಹೆ ಮೇರೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮರು ಜಾತಿಗಣತಿ ನಡೆಸಲು ಮುಂದಾಗಿದೆ.

ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ ಹಿನ್ನೆಲೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಮಾಡಿ ಸಿಎಂ ಸಿದ್ದರಾಮಯ್ಯ ಜಾತಿಗಣತಿಯ ಮರುಸಮೀಕ್ಷೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆ.22ರಿಂದ ಅ.7ರವರೆಗೆ 15 ದಿನಗಳ ಕಾಲ ಜಾತಿ ಗಣತಿ ಸಮೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ದಸರಾ ರಜೆ ಇರೋದ್ರಿಂದ ಶಿಕ್ಷಕರನ್ನ ಬಳಸಿಕೊಂಡು ಜಾತಿ ಗಣತಿ ಮಾಡಲಾಗುತ್ತದೆ. ಜಾತಿ ಗಣತಿಗೆ ಸುಮಾರು 325 ಕೋಟಿ ರೂ. ಖರ್ಚಾಗಲಿದೆ. ನಿವೃತ್ತ ಅಡ್ವಕೇಟ್ ಜನರಲ್ ಮಧುಸೂದನ್ ನಾಯಕ್ ಸಮಿತಿಯಿಂದ ಜಾತಿ ಗಣತಿ ನಡೆಯಲಿದ್ದು, ಡಿಸೆಂಬರ್ ಒಳಗೆ ವರದಿ ಬರಲಿದೆ. ಸಮೀಕ್ಷೆ ವೇಳೆ 60 ಪ್ರಶ್ನೆಗಳನ್ನು ಕೇಳಲಾಗುತ್ತೆ, ಈಗಾಗಲೇ 1.52 ಕೋಟಿ ಮನೆಗಳಿಗೆ ಸ್ಟಿಕ್ಕರ್ ಹಾಕಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ CP ರಾಧಾಕೃಷ್ಣನ್!







