ಅಮೆರಿಕದಲ್ಲಿ ಭೀಕರ ರಸ್ತೆ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ಸಾವು!

ಕೋಲಾರ : ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೋಲಾರ ಮೂಲದ ಬಾಡಿ ಬಿಲ್ಡರ್ ಸಾವನ್ನಪ್ಪಿದ್ದಾರೆ. ಸುರೇಶ್ ಬಾಬು (42) ಮೃತ ದುರ್ದೈವಿ.

ಬಾಡಿ ಬಿಲ್ಡರ್ ಗಾಂಧಿನಗರದ ಚಲಪತಿ ಹಾಗೂ ಮುನಿಯಮ್ಮ ದಂಪತಿಯ ಪುತ್ರ. ಸುರೇಶ್, ಮೂರು ದಿನಗಳ ಹಿಂದೆ ಫ್ಲೋರಿಡಾದಿಂದ ಟೆಕ್ಸಾಸ್‍ಗೆ ತೆರಳುವಾಗ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸುರೇಶ್ ಬಾಬು ಅವರು ಮಾಡೆಲಿಂಗ್ ಹಾಗೂ ಕನ್ನಡದ ಹಲವು ನಟ-ನಟಿಯರಿಗೆ ದೈಹಿಕ ತರಬೇತಿಯನ್ನು ನೀಡುತ್ತಿದ್ದರು. ದೆಹಲಿ ಮೂಲದ ಯುವತಿಯನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಸುರೇಶ್ ಪಾರ್ಥಿವ ಶರೀರವನ್ನು ಕೋಲಾರಕ್ಕೆ ತರಲು ಅಮೆರಿಕದಲ್ಲಿರುವ ಕನ್ನಡ ಸಂಘ ಹಾಗೂ ಇತರ ಸಂಘಟನೆಗಳು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : ಸುದೀಪ್​ ನಟನೆಯ 47ನೇ ಸಿನಿಮಾದ ಟೈಟಲ್ ರಿವೀಲ್​ – ರಗಡ್​ ಲುಕ್​ನಲ್ಲಿ ಕಿಚ್ಚ!

Btv Kannada
Author: Btv Kannada

Read More