ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ನಟ ದರ್ಶನ್? ಇಂದು ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಲಿದೆ.

ಸುಪ್ರೀಂ ಕೋರ್ಟ್​ ತೀರ್ಪಿನ ಬಳಿಕ ದರ್ಶನ್ ಹಾಗೂ ಲಕ್ಷ್ಮಣ್, ಜಗದೀಶ್, ನಾಗರಾಜ್, ಪ್ರದೂಷ್ ಸೇರಿ ಈ ಪ್ರಕರಣದ ಕೆಲ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರೆ ಆರೋಪಿಗಳನ್ನ ಬೇರೆ ಜೈಲಿಗೆ ಹಾಕುವುದರ ಕುರಿತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಅರ್ಜಿಯನ್ನು 64ನೇ ಸೆಷನ್ಸ್ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಆದರೆ ದರ್ಶನ್ ಸೇರಿ ಇತರೆ ಆರೋಪಿಗಳನ್ನು ಬೇರೆ ಜೈಲಿಗೆ ಕಳುಹಿಸಬಾರದು ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ದರ್ಶನ್ ಪರ ವಕೀಲರು ಕೋರ್ಟ್​ಗೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಇಂದು ಸ್ಥಳಾಂತರ ಕೋರಿರುವ ಅರ್ಜಿ ವಿಚಾರಣೆ ಕೋರ್ಟ್​ನಲ್ಲಿ  ನಡೆಯಲಿದೆ.

ಸ್ಥಳಾಂತರ ಕೋರಿರುವ ಅರ್ಜಿ ವಿಚಾರಣೆ ಜೊತೆಗೆ ಜೈಲಿನಲ್ಲಿ ಕನಿಷ್ಠ ಸವಲತ್ತು ಕೋರಿ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜೈಲಿನಲ್ಲಿ ಮ್ಯಾನ್ಯುಯಲ್ ಪ್ರಕಾರ ಎರಡು ದಿಂಬು, ಎರಡು ಬೆಡ್ ಶೀಟ್, ದಟ್ಟ ಹಾಗೂ ಹೆಚ್ಚುವರಿ ಬಟ್ಟೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆಯೂ ವಿಚಾರಣೆ ನಡೆಸಿ ನ್ಯಾಯಾಲಯ ಆದೇಶ ಪ್ರಕಟ ಮಾಡುವ ಸಾಧ್ಯತೆ ಇದೆ.

ಪವಿತ್ರಾಗೌಡ ಜಾಮೀನು ಅರ್ಜಿ ಕೂಡ ಇಂದು ವಿಚಾರಣೆ : ಪವಿತ್ರಾಗೌಡ ಜಾಮೀನು ಅರ್ಜಿ ಕೂಡ ಇಂದೇ ವಿಚಾರಣೆ ನಡೆಯಲಿದೆ. ಪವಿತ್ರಾಗೌಡಗೆ ಜಾಮೀನು ಕೋರಿ ಹಿರಿಯ ವಕೀಲ ಬಾಲನ್ ಅವರು ಅರ್ಜಿ ಸಲ್ಲಿಸಿದ್ದು, ಈಗಾಗಲೇ ವಾದವನ್ನೂ ಮಂಡಿಸಿದ್ದಾರೆ. ಇಂದು ಪವಿತ್ರಾ ಗೌಡಗೆ ಬೇಲ್ ಸಿಗುತ್ತಾ ಇಲ್ವಾ ಅನ್ನೋದು ಗೊತ್ತಾಗಲಿದೆ. ಬೇಲ್ ಸಿಕ್ಕಿದರೆ ಪವಿತ್ರಾ ಗೌಡ ಮತ್ತೆ ಆರಾಮವಾಗಿ ಬ್ಯುಸಿನೆಸ್ ಕಂಟಿನ್ಯೂ ಮಾಡುತ್ತಾ ಫ್ಯಾಮಿಲಿ ಜೊತೆ ಇರಬಹುದು. ಜಾಮೀನು ಸಿಗದಿದ್ದರೆ ಪರಪ್ಪನ ಅಗ್ರಹಾರದಲ್ಲಿಯೇ ಇರಬೇಕಾಗುತ್ತದೆ.

ಇದನ್ನೂ ಓದಿ : ಇನ್ನು ಮುಂದೆ ಡಾಕ್ಟರ್ ಗೀಚುವಂತಿಲ್ಲ, ಬರೆಯಬೇಕು – ಹೈಕೋರ್ಟ್ ಆದೇಶ!

Btv Kannada
Author: Btv Kannada

Read More