ಬೆಂಗಳೂರು : ನಡುರಸ್ತೆಯಲ್ಲಿಯೇ ಬಿಎಂಟಿಸಿ ಬಸ್ಗಳನ್ನು ನಿಲ್ಲಿಸಿ ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ನಡೆದಿದೆ.

KA57F1180 ಮತ್ತು KA51AK7332 ನಂಬರ್ನ ಬಿಎಂಟಿಸಿ ಬಸ್ನ ಚಾಲಕರಿಬ್ಬರು ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿಕೊಂಡು ರಂಪಾಟ ಮಾಡಿದ್ದು, ಪ್ರಯಾಣಿಕರು ಬಸ್ ಮೂವ್ ಮಾಡುವಂತೆ ಎಷ್ಟೇ ಕೇಳಿಕೊಂಡರೂ ತಲೆಕೆಡಿಸಿಕೊಳ್ಳದೇ ಅಸಭ್ಯ ಪದಗಳಿಂದ ನಿಂದಿಸಿಕೊಂಡು ಇಬ್ಬರು ಕಿತ್ತಾಡಿದ್ದಾರೆ.
ಚಾಲಕರಿಬ್ಬರ ಗಲಾಟೆ ನೋಡಿದ ಪ್ರಯಾಣಿಕರು ನೀವು ಹೀಗೆ ಮಾಡಿದರೆ ನಾವು ಯಾರಿಗೆ ಹೇಳಬೇಕು? ಯಾಕೆ ಗಾಡಿಯನ್ನು ಸೈಡ್‌ಗೆ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಬ್ಬರ ಕಿತ್ತಾಟದಿಂದ ಬೇಸತ್ತ ಪ್ರಯಾಣಿಕರು ವಿಡಿಯೋ ಮಾಡಿ ಚಾಲಕರ ಬೀದಿ ರಂಪಾಟವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ : ಲಿವಿಂಗ್ ಟುಗೆದರ್ನಲ್ಲಿದ್ರೂ ಮತ್ತೊಬ್ಬನ ಜೊತೆ ಸುತ್ತಾಟ.. ಗೆಳತಿ ಮೇಲೆ ಪೆಟ್ರೋಲ್ ಹಾಕಿ ಕೊಂದಿದ್ದ ಕ್ಯಾಬ್ ಡ್ರೈವರ್ ಅರೆಸ್ಟ್!







