ಕೊಡಗು : “ಕೋಟ್ಯ 2026” ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಡಿಕೇರಿ KSRTC ಬಸ್ ನಿಲ್ದಾಣದ ವಿಡಿಯೋ ಬಳಸಿಕೊಂಡು “ಕೊಡಗಿನಲ್ಲಿ ಡೇಟಿಂಗ್‌ಗಾಗಿ ಹುಡುಗಿಯರು, ಆಂಟಿಯರು ಸಿಗುತ್ತಾರೆ” ಸರ್ವಿಸ್ ಬೇಕಾದ್ರೆ ಕಾಲ್ ಮಾಡಿ ಎಂದು ವಿಡಿಯೋ ಅಪ್ಲೋಟ್ ಮಾಡಿದ್ದರು. ಈ ವೀಡಿಯೋಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ 318(4), 78 2 & 66(2). 67 33 5 & 6 Indecent Representation of Women (Prohibition) Act & 8 Immoral Traffic (Prevention) Act ಅಡಿಯಲ್ಲಿ ಕೇಸ್ ದಾಖಲಾಗಿತ್ತು.

ಈ ಪ್ರಕರಣದ ಆರೋಪಿಯನ್ನು ಮಡಿಕೇರಿ ಉಪವಿಭಾಗದ DSP ಸೂರಜ್.ಪಿ.ಎ, CPI ರಾಜು.ಪಿ.ಕೆ, PSI ಕು|| ಅನ್ನಪೂರ್ಣ ಎಸ್.ಎಸ್, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು ಪತ್ತೆ ಮಾಡಿ ಬಂಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋ ಅಪಲೋಡ್ ಮಾಡಿದ್ದ ಖಾತೆದಾರ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ (26) ಎಂಬಾತನನ್ನು ಪೊಲೀಸರು ಇಂದು ಪತ್ತೆಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತ ಬಿ.ಪಿ ದಿನೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ದೇಹದಾನ, ಅಂಗಾಂಗದಾನಕ್ಕೆ ಮುಂದಾದ ಯುವ ನಟ ರಾಜವರ್ಧನ್!







