ದೇಹದಾನ, ಅಂಗಾಂಗದಾನಕ್ಕೆ ಮುಂದಾದ ಯುವ ನಟ ರಾಜವರ್ಧನ್!

ಯುವ ನಟ ರಾಜವರ್ಧನ್ ದೇಹದಾನ, ಅಂಗಾಂಗದಾನಕ್ಕೆ ಮುಂದಾಗಿದ್ದು, ಈ ಮೂಲಕ ನಟ ರಾಜವರ್ಧನ್ ಇತರರಿಗೆ ಮಾದರಿಯಾಗಿದ್ದಾರೆ.

ದಿವಂಗತ ನಟ ಲೋಕೇಶ್ ಸೇರಿದಂತೆ ಹಲವರು ದೇಹದಾನ ಮಾಡಿ ಸಾರ್ಥಕರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಕೂಡ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಇದೇ ಹಾದಿಯಾಗಿ ನಟ ರಾಜವರ್ಧನ್ ಅವರು ಅಂಗಾಂಗ ದಾನ ಮಾಡೋದಾಗಿ ಘೋಷಿಸಿದ್ದಾರೆ.

ನೇತ್ರದಾನಕ್ಕೆ ಅನೇಕರಿಗೆ ಸ್ಫೂರ್ತಿಯಾದವರು ಡಾ.ರಾಜ್‌ಕುಮಾರ್. ಹಾಗೆಯೇ ದೇಹದಾನವೂ ಇನ್ನೂ ಶ್ರೇಷ್ಠವಾದ ದಾನ. ಇದೀಗ ನಟ ರಾಜವರ್ಧನ್ ಬಿಜಿಎಸ್ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವೊಂದರರಲ್ಲಿ ಪಾಲ್ಗೊಂಡು ಅದೇ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಹಾಗೂ ದೇಹದಾನ ಮಾಡೋದಾಗಿ ಘೋಷಿಸಿದ್ದಾರೆ. ಅಂದಹಾಗೆ ರಾಜವರ್ಧನ್ ತಂದೆ ಡಿಂಗ್ರಿ ನಾಗರಾಜ್ ಕೂಡ ದೇಹದಾನ ಮಾಡಿದ್ದಾರೆ.

ಇದನ್ನೂ ಓದಿ : ಅದ್ದೂರಿಯಾಗಿ ಸೆಟ್ಟೇರಿದ ‘ಮಂಗಳಾಪುರಂ’ ಚಿತ್ರ – ರಿಷಿಗೆ ಜೋಡಿಯಾದ ಗೌತಮಿ ಜಾದವ್!

Btv Kannada
Author: Btv Kannada

Read More