ಧರ್ಮಸ್ಥಳ ಗ್ರಾಮದಲ್ಲಿ ಶವ ಹೂಳಲು ದೇವಸ್ಥಾನದ ಮಾಹಿತಿ ಕೇಂದ್ರ ಹೇಳ್ತಿತ್ತು – ‘INDIA TODAY’ಗೆ ಶಾಕಿಂಗ್ ವಿಷಯ ಬಿಚ್ಚಿಟ್ಟ ದೂರುದಾರ ಭೀಮ!

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವವಗಳನ್ನು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಹೇಳಿದಂತೆ ಹಲವಾರು ಜಾಗದಲ್ಲಿ SIT ಅಧಿಕಾರಿಗಳು ಉತ್ಖನನ ಕಾರ್ಯವನ್ನು ಮಾಡುತ್ತಿದ್ದಾರೆ.

ಇದೀಗ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಹೊರತುಪಡಿಸಿ ಯಾವುದೇ ಮಾಧ್ಯಮ, ಅಥವಾ ಎಲ್ಲಿಯೂ ಕಾಣಿಸದ ದೂರುದಾರ INDIA TODAY ವಾಹಿನಿ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ನಮಗೆ ಪಂಚಾಯತ್‌ನಿಂದ ಶವ ಹೂಳಲು ಎಂದಿಗೂ ಆದೇಶಗಳು ಬಂದಿಲ್ಲ. ಏನು ಮಾಡಬೇಕೆಂದು ಯಾವಾಗಲೂ ದೇವಾಲಯದ ಮಾಹಿತಿ ಕೇಂದ್ರವೇ ನಮಗೆ ಹೇಳುತ್ತಿತ್ತು. ಆ ಸ್ಥಳದಲ್ಲಿ ಯಾವುದೇ ಸ್ಮಶಾನಗಳು ಇರಲಿಲ್ಲ. ನಾವು ಕಾಡುಗಳಲ್ಲಿ, ಹಳೆಯ ರಸ್ತೆಗಳಲ್ಲಿ, ನದಿ ದಂಡೆಗಳ ಬಳಿಯೂ ಶವಗಳನ್ನು ಹೂಳುತ್ತಿದ್ದೆವು ಎಂದು INDIA TODAY ಸಂದರ್ಶನದಲ್ಲಿ ಹೇಳಿದ್ದಾರೆ.

ನಾವು ಬಾಹುಬಲಿ ಬೆಟ್ಟಗಳಲ್ಲಿ ಒಬ್ಬ ಮಹಿಳೆಯನ್ನು ಮತ್ತು ನೇತ್ರಾವತಿ ಸ್ನಾನದ ಘಟ್ಟದಲ್ಲಿ ಸುಮಾರು 70 ಶವಗಳನ್ನು ಸಮಾಧಿ ಮಾಡಿದ್ದೇವೆ. ಸ್ಥಳೀಯರು ಕೆಲವೊಮ್ಮೆ ಸಮಾಧಿಗಳನ್ನು ನೋಡಿದ್ದಾರೆ ಆದರೆ ಎಂದಿಗೂ ಈ ವಿಚಾರಕ್ಕೆ ಮಧ್ಯಪ್ರವೇಶಿಸಲಿಲ್ಲ. ಜನರು ನಮ್ಮನ್ನು ನೋಡಿದರು, ಆದರೆ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ನಮಗೆ ಆದೇಶಗಳು ಬರುತ್ತಿದ್ದವು, ನಾವು ಶವಗಳನ್ನು ಸಮಾಧಿ ಮಾಡಿದ್ದೆವು. ಅನೇಕ ಶವಗಳ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಗುರುತುಗಳಿದ್ದವು, ಮಕ್ಕಳಿಂದ ಹಿಡಿದು ವೃದ್ಧರವರೆಗಿನ ದೇಹಗಳು ಇದ್ದವು, ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಶವಗಳಿತ್ತು ಎಂದು ದೂರುದಾರ INDIA TODAY ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು, ಮೊದಲು ನಾವು ಗುರುತಿಸಬಹುದಾದ ಹಳೆಯ ರಸ್ತೆ ಇತ್ತು, ಆದರೆ ಜೆಸಿಬಿ ಕೆಲಸದ ನಂತರ, ನಮಗೆ ಕೆಲವು ಸ್ಥಳಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆಗ ಕಾಡು ವಿರಳವಾಗಿತ್ತು, ಈಗ ಅದು ದಟ್ಟವಾಗಿದೆ. ಇಲ್ಲಿಯವರೆಗೆ, SIT ಅವರು 13 ಸ್ಥಳಗಳಿಂದ ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದೆ, ಅದರಲ್ಲಿ ಒಂದು ಪುರುಷನದ್ದಾಗಿತ್ತು. 100 ಕ್ಕೂ ಹೆಚ್ಚು ಸಮಾಧಿಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡರೂ ಇಷ್ಟು ಕಡಿಮೆ ಶವಗಳು ಏಕೆ ಪತ್ತೆಯಾಗಿವೆ ಎಂದು ಸಂದೇಹವಾದಿಗಳು ಪ್ರಶ್ನಿಸಿದ್ದಾರೆ. ಆದರೆ ನಾವು ಸಮಾಧಿ ಮಾಡಿದವರು ಮತ್ತು ನಾವು ಸತ್ಯವನ್ನು ಹೇಳುತ್ತಿದ್ದೇವೆ ಎಂದು ದೂರುದಾರ INDIA TODAY ಸಂದರ್ಶನದಲ್ಲಿ ಹೇಳಿದ್ದಾರೆ.

ಸೌಜನ್ಯ ಕೊಲೆ ಪ್ರಕರಣ : INDIA TODAY ಸಂದರ್ಶನದಲ್ಲಿ ದೂರುದಾರ, 2012ರಲ್ಲಿ ಧರ್ಮಸ್ಥಳದ ಬಳಿಯ ನಿರ್ಜನ ಪ್ರದೇಶದಲ್ಲಿ 17 ವರ್ಷದ ಸೌಜನ್ಯ ಎಂಬ ಯುವತಿಯ ಕೊಲೆಯ ಬಗ್ಗೆ ಅವರಿಗಾದ ಅನುಭವದ ಬಗ್ಗೆಯೂ ಮಾಹಿತಿ ನೀಡಿದರು. ಆಕೆ ಕೊಲೆಯಾದ ರಾತ್ರಿ ನಾನು ಎಲ್ಲಿದ್ದೇನೆ ಎಂದು ಕೇಳುವ ಕರೆ ನನಗೆ ಬಂದಿತು. ನಾನು ರಜೆಯ ಮೇಲೆ ನನ್ನ ಊರಿನಲ್ಲಿದ್ದೇನೆ ಎಂದು ಹೇಳಿದೆ. ರಜೆಯ ಮೇಲೆ ಬಂದಿದ್ದಕ್ಕಾಗಿ ಅವರು ನನ್ನನ್ನು ಕೂಗಿದರು. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದೆ ಎಂದು ಹೇಳಿದರು.

ಇದನ್ನೂ ಓದಿ : ಸುಪ್ರೀಂ ಕೋರ್ಟ್​ ತೀರ್ಪು ಬೆನ್ನಲ್ಲೇ ಪವಿತ್ರಾ ಗೌಡ ಅರೆಸ್ಟ್!

 

 

 

 

 

Btv Kannada
Author: Btv Kannada

Read More