ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ದರ್ಶನ್ ಸೇರಿ 7 ಜನ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆದರೆ ನಟ ಎಲ್ಲಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ. ಎಲ್ಲಾ ಕಡೆ ದರ್ಶನ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ.
ಬೆಂಗಳೂರು ಹಾಗೂ ಮೈಸೂರಿನಲ್ಲಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ದರ್ಶನ್ ಇಲ್ಲ ಎನ್ನಲಾಗುತ್ತಿದೆ. ಇನ್ನೂ ಮೈಸೂರಿನ ಫಾರ್ಮ್ ಹೌಸ್ ಬಳಿಯೂ ಪೊಲೀಸರು ತೆರಳಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಕರ್ನಾಟಕದಲ್ಲಿಲ್ಲ, ರಾಜ್ಯ ತೊರೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ದರ್ಶನ್‌ಗಾಗಿ ಪೊಲೀಸರು 12 ಕಡೆ ಕಾದು ಕುಳಿತಿದ್ದು, ಇದೀಗ ದರ್ಶನ್ ಕಾರು ಸುವರ್ಣಾವತಿ ಡ್ಯಾಂ ಬಳಿಯ ಟೋಲ್ ದಾಟುವ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ.
ಬೇಲ್ ರದ್ದಾಗ್ತಿದ್ದಂತೆ ನಟ ದರ್ಶನ್ ತಮಿಳುನಾಡಿಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾತ್ರಿ ಮಡಿಕೇರಿಯಲ್ಲಿ ಉಳಿದುಕೊಂಡಿದ್ದ ದರ್ಶನ್ ಬೆಳಗ್ಗೆ ಮಡಿಕೇರಿಯಿಂದ ತಮಿಳುನಾಡಿಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಸತ್ಯಮಂಗಲದ ಗ್ರಾಮದಲ್ಲಿ ಕುದುರೆ ಜಾತ್ರೆಯಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಕಾನೂನಿನ ಮುಂದೆ ಎಲ್ಲರೂ ಸಮಾನರು – ದರ್ಶನ್ ಬೇಲ್ ಕ್ಯಾನ್ಸಲ್ಗೆ ನಟಿ ರಮ್ಯಾ ಖಡಕ್ ರಿಯಾಕ್ಷನ್!







