‘ಭಾರ್ಗವಿ LLB’ ಧಾರಾವಾಹಿಗೆ ಉಗ್ರಂ ಮಂಜು ಭರ್ಜರಿ ಎಂಟ್ರಿ!

ಕಲರ್ಸ್ ಕನ್ನಡ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆಯುಳ್ಳ ಸೀರಿಯಲ್​​​ ‘ಭಾರ್ಗವಿ LLB’ ಕೂಡ ಪ್ರೇಕ್ಷಕರ ಮನ ಗೆದ್ದಿದೆ.

ಸೋಮವಾರದಿಂದ-ಶುಕ್ರವಾರ ರಾತ್ರಿ 8.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಟ ಉಗ್ರಂ ಮಂಜು ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

ಬುಧವಾರ ಮತ್ತು ಗುರುವಾರದ ಸಂಚಿಕೆಯಲ್ಲಿ (ಆಗಸ್ಟ್ 13,14) ಉಗ್ರಂ ಮಂಜು ಬರುತ್ತಿರುವುದು, ನಾಯಕ ಅರ್ಜುನ್ ಕಥಾನಾಯಕಿ ಭಾರ್ಗವಿಗೆ ತಾಳಿ ಕಟ್ಟುವ ಸನ್ನಿವೇಶವು  ಸಂಚಿಕೆಯ ಹೈಲೈಟ್. ‘ಭಾರ್ಗವಿ LLB” ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಪೂರ್ತಿದಾಯಕ ಕತೆ.

ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕತೆ ಹೇಳುತ್ತದೆ. ಕಥೆಯಲ್ಲಿ ಒಂದು ಪ್ರಮುಖ ತಿರುವಿನಲ್ಲಿ – ಅರ್ಜುನ್ ಭಾರ್ಗವಿ ಅನಿರೀಕ್ಷಿತವಾಗಿ ಮದುವೆಯಾಗುತ್ತಾರೆ.

ಮದುವೆಯ ವಿಷಯ ತಿಳಿದ ನಂತರ ಜೆಪಿಯ ಪ್ರತಿಕ್ರಿಯೆ ಏನಾಗುತ್ತದೆ? ಬೃಂದಾ ಕೂಡಾ ಅದೇ ಮನೆ ಸೇರುವುದು ಖಂಡಿತವಾಗಿರುವ ಹಿನ್ನೆಲೆಯಲ್ಲಿ ಭಾರ್ಗವಿ ಕುಟುಂಬವು ಇದನ್ನು ಹೇಗೆ ಸ್ವೀಕರಿಸುತ್ತೆೆ?ಭಾರ್ಗವಿಯ ಮೊದಲ ಕೋರ್ಟ್ ಪ್ರಕರಣ ಅಂತಿಮ ಹಂತದಲ್ಲಿದೆ. ಜೆಪಿಯನ್ನು ಸೋಲಿಸಲು ಭಾರ್ಗವಿ ಯಶಸ್ವಿಯಾಗುವಳೇ? ವೃತ್ತಿಯಲ್ಲಿ ಭಾರ್ಗವಿ ಕೋರ್ಟ್‌ನಲ್ಲಿ ಕಠಿಣ ಹೋರಾಟ ನಡೆಸಿದ್ದು, ಜೆಪಿಯ ಶ್ರೇಯಸ್ಸಿಗೆ ಹಾನಿಯಾಗಿದೆ. ಅರ್ಜುನ್ ಮದುವೆಯಾದಾಗ, ಜೆಪಿ ಅವರ ಇಷ್ಟಗಳಿಗೆ ವಿರುದ್ಧವಾಗಿ ಅರ್ಜುನ್ ಹೋಗುವ ಕಾರಣ, ಜೆಪಿಯ ವೈಯಕ್ತಿಕ ಜೀವನದಲ್ಲೂ ಪೆಟ್ಟು ಕೊಟ್ಟಿದೆ. ಹೀಗಿರುವಾಗ ಜೆಪಿ ತನ್ನ ಸೊಸೆ ಭಾರ್ಗವಿಯ ವಿರುದ್ಧ ಹೂಡುವ ರಣತಂತ್ರಗಳೇನು? ನೋಡಿ ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿಯಲ್ಲಿ.

ಇದನ್ನೂ ಓದಿ : ಕಾನೂನಿನ ಮುಂದೆ ಎಲ್ಲರೂ ಸಮಾನರು – ದರ್ಶನ್ ಬೇಲ್​​ ಕ್ಯಾನ್ಸಲ್​ಗೆ​​ ನಟಿ ರಮ್ಯಾ ಖಡಕ್​​ ರಿಯಾಕ್ಷನ್!

Btv Kannada
Author: Btv Kannada

Read More