ಎಲ್ಲರನ್ನೂ ಎಚ್ಚರಿಸಿ ಪೋಸ್ಟ್ ಹಾಕಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್!

ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡ್ತಿರುವ ಧರ್ಮಸ್ಥಳ ಗ್ರಾಮದ ನೂರಾರು ಶವಗಳ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹಲವು ಸಂಘರ್ಷಗಳಿಗೆ ಕಾರಣವಾಗ್ತಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಅನಾಮಿಕ ನೀಡಿರುವ ದೂರು ಆಧರಿಸಿ SIT ಪೊಲೀಸರು ತನಿಖೆಯನ್ನು ಮಾಡ್ತಿದ್ದಾರೆ.

ಇನ್ನೊಂದೆಡೆ, ನಮ್ಮ ಹಿಂದೂ ಪುಣ್ಯಕ್ಷೇತ್ರಗಳನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಒಂದು ಬಣದ ಜನರು ಆರೋಪಿಸುತ್ತಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ಸಾಕಷ್ಟು ಸದ್ದು ಮಾಡ್ತಿದೆ.

ಇದೀಗ ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್ ಎಲ್ಲರನ್ನೂ ಎಚ್ಚರಗೊಳಿಸುವ ಸಲುವಾಗಿ​​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿ.ಎಲ್​.ಸಂತೋಷ್ ಪೊಸ್ಟ್​ನಲ್ಲೇನೆದೆ? ‘ಎಚ್ಚೆತ್ತುಕೊಳ್ಳೋಣ.. ಶಬರಿಮಲೈ, ಶನಿಸಿಂಗಾಪುರ, ಈಶಾ.. ಈಗ ಧರ್ಮಸ್ಥಳ’ ಎಂದು ಬಿ.ಎಲ್​.ಸಂತೋಷ್  ಅವರು ಬರೆದುಕೊಂಡಿದ್ದಾರೆ

ಇದನ್ನೂ ಓದಿ : ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತ ಕಳವು – ಸ್ಫೋಟಕ ದಾಖಲೆ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ!

 

Btv Kannada
Author: Btv Kannada

Read More