ಬಿಗ್​ಬಾಸ್​ ರಜತ್​ಗೆ ಡೆತ್ ಥ್ರೆಟ್​​ ಕೊಟ್ಟ ಶಾರದಾ ಭಟ್!

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ಎಸ್​​ಐಟಿ ತನಿಖೆ ನಿರ್ಣಾಯಕ ಹಂತ ತಲುಪುತ್ತಿದ್ದಂತೆ ನಿನ್ನೆ ಎರಡು ಗುಂಪುಗಳ ನಡುವೆ ಘರ್ಷಣೆ ಶುರುವಾಗಿದೆ. ಈ ಹಿನ್ನೆಲೆ ಧರ್ಮಸ್ಥಳ ಗ್ರಾಮದಲ್ಲಿ ಸದ್ಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು, ಧರ್ಮಸ್ಥಳ ಗ್ರಾಮಕ್ಕೆ ನಿನ್ನೆ ಬಿಗ್​​ಬಾಸ್ ಖ್ಯಾತಿಯ ರಜತ್ ಕಿಶನ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಯೂಟ್ಯೂಬರ್ಸ್​ಗಳ ಹಲ್ಲೆ ನಡೆದಿತ್ತು. ಯೂಟ್ಯೂಬರ್ಸ್​ಗಳ ಮೇಲೆ ಹಲ್ಲೆ ನಡೆದಾಗ ಸ್ಥಳದಲ್ಲೇ ಇದ್ದ ರಜತ್ ಅವರು ಬಳಿಕ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಹಗಲು ಹೊತ್ತಿನಲ್ಲೇ ಭೀಕರವಾಗಿ ಹಲ್ಲೆ ಮಾಡುತ್ತಾರೆ. ನನ್ನ ಕಣ್ಣೆದುರಿಗೆ ಮಾಧ್ಯಮದವರ ಮೇಲೆ ವಿಪರೀತ ಹಲ್ಲೆ ಮಾಡಿದ್ದಾರೆ. ಯೂಟ್ಯೂಬರ್ಸ್‌ಗೆ ಹಲ್ಲೆ ಮಾಡಿರುವ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದು ರಜತ್ ತಿಳಿಸಿದ್ದಾರೆ.

ಈ ಬೆನ್ನಲ್ಲೇ ರಜತ್​​ ಕಿಶನ್​ಗೆ ಶಾರದಾ ಭಟ್ ಎಂಬ ಮಹಿಳೆ ಫೇಸ್​ಬುಕ್​ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. “ಬಿಗ್​​ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ. ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ, ಒಂದು ಗಂಡು ಮತ್ತು ಒಂದು ಹೆಣ್ಣು. ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕೊಳ್ಳಿ ಅಕ್ಷತಾ ಅವರೇ.. ಇದು ಮಂಡ್ಯ ಅಲ್ಲ ಕರಾವಳಿ” ಎಂದು ನೇರಾನೇರಾ ಡೆತ್ ಥ್ರೆಟ್​​ ಕೊಟ್ಟಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ನಿನ್ನೆ ಆಗಿದ್ದೇನು? ಆರಂಭದಲ್ಲಿ ಮಾತಿನ ಮೂಲಕ ಯೂಟ್ಯೂಬರ್‌ಗಳು ಹಾಗೂ ಮತ್ತೊಂದು ಗುಂಪಿನ ಮಧ್ಯೆ ಶುರವಾದ ವಾಗ್ವಾದ ನಂತರ ಜಗಳಕ್ಕೆ ತಿರುಗಿತ್ತು. ಈ ಜಗಳದಲ್ಲಿ ಅತಿರೇಕಕ್ಕೆ ಹೋಗಿ ಯೂಟ್ಯೂಬರ್ಸ್‌ ಬೆಂಬಲಿಗರು ಕರ್ತವ್ಯದಲ್ಲಿದ್ದ ಖಾಸಗಿ ವಾಹಿನಿ ವರದಿಗಾರ ಹಾಗೂ ಕ್ಯಾಮೆರಾಮ್ಯಾನ್ ಮೇಲೂ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳ ಗ್ರಾಮದಲ್ಲಿ ಮೂವರು ಯೂಟ್ಯೂಬರ್ಸ್​ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ!

 

Btv Kannada
Author: Btv Kannada

Read More