ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರೀಸ್ ‘ಶೋಧ’ದಲ್ಲಿ ನಿರ್ದೇಶಕ ಪವನ್ ಕುಮಾರ್ ಆಕ್ಟಿಂಗ್ – ಆ.22ಕ್ಕೆ Zee5ನಲ್ಲಿ ಸ್ಟ್ರೀಮಿಂಗ್!

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ಗೌಡ ನೇತೃತ್ವದ ಕೆಆರ್​ಜಿ ಸ್ಟುಡಿಯೋಸ್ ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರುಗಳಿಸಿಕೊಂಡಿದೆ. ಭಿನ್ನ, ಗುಣಮಟ್ಟದ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಿಸುತ್ತಿರುವ ಕೆಆರ್​ಜಿ ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಚಿತ್ರ ನಿರ್ಮಾಣ ಹಾಗೂ ವಿತರಣೆಯಲ್ಲಿ ಹೆಸರು ಮಾಡಿರುವ ಕೆಆರ್​ಜಿ ಸ್ಟುಡಿಯೋ ವೆಬ್ ಸಿರೀಸ್ ನಿರ್ಮಾಣಕ್ಕಿಳಿದೆ. Zee5 ಜೊತೆ ಕೈ ಜೋಡಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ವೆಬ್ ಸರಣಿಗಳನ್ನು ಉಣಬಡಿಸುವ ತವಕದಲ್ಲಿದೆ. ಅದರ ಮೊದಲ ಭಾಗವಾಗಿ ಶೋಧ ಎಂಬ ವೆಬ್ ಸಿರೀಸ್ ಗೆ ಕೆಆರ್​ಜಿ ಬಂಡವಾಳ ಹೂಡಿದೆ.

ಕೆಆರ್​ಜಿ ಸ್ಟುಡಿಯೋಸ್ ನಿರ್ಮಿಸಿ, ಪ್ರೆಸೆಂಟ್ ಮಾಡುತ್ತಿರುವ ಶೋಧ ವೆಬ್ ಸರಣಿಗೆ ಸುನಿಲ್ ಮೈಸೂರು ಆಕ್ಷನ್ ಕಟ್ ಹೇಳಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮನಸಾರೆ, ಪಂಚರಂಗಿ, ಲೈಫು ಇಷ್ಟೇನೆ ಮತ್ತು ಕಲ್ಟ್ ಸೈಕಲಾಜಿಕಲ್ ಥ್ರಿಲ್ಲರ್ ಲೂಸಿಯಾ ಸಿನಿಮಾಗಳ ಮೂಲಕ ನಟನೆ ಹಾಗೂ ನಿರ್ದೇಶನದಲ್ಲಿ ಹೆಸರು ಮಾಡಿರುವ ಪವನ್ ಕುಮಾರ್, ಶೋಧ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪವನ್ ಕುಮಾರ್ ಶೋಧ ವೆಬ್ ಸರಣಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಶೋಧದಲ್ಲಿ ನಟಿಸುವುದು ನನಗೆ ಸಂಪೂರ್ಣವಾಗಿ ಹೊಸ ಪ್ರಯಾಣವಾಗಿದೆ. ಬರವಣಿಗೆ ಮತ್ತು ನಿರ್ದೇಶನದಿಂದ ಬಂದ ನಂತರ ಕ್ಯಾಮೆರಾ ಮುಂದೆ ಹೆಜ್ಜೆ ಹಾಕುವುದು ಭಾವನೆಗಳನ್ನು ಹೊಸ ರೀತಿಯಲ್ಲಿ ಅನ್ವೇಷಿಸಲು ನನಗೆ ಸವಾಲು ಹಾಕಿದೆ ಎಂದಿದ್ದಾರೆ.

ಅಯ್ಯನ‌ ಮನೆ ಸೂಪರ್ ಸಕ್ಸಸ್ ಬಳಿ Zee5‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮತ್ತೊಂದು ವೆಬ್ ಸರಣಿಯೇ ಶೋಧ. ಆಗಸ್ಟ್ 22ರಂದು ಶೋಧ ವೆಬ್ ಸಿರೀಸ್ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಅಯ್ಯನ ಮನೆ ವೆಬ್ ಸರಣಿಗೆ ಭರಪೂರ ಮೆಚ್ಚುಗೆ ಸಿಕ್ಕಿದ್ದು, ಈಗ ಶೋಧ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ.

ಇದನ್ನೂ ಓದಿ : ಲಾರಿ ಚಲಿಸುತ್ತಿದ್ದಾಗಲೇ ಕುಸಿದು ಬಿದ್ದ ಸೇತುವೆ – ಚಾಲಕ ಪ್ರಾಣಾಪಾಯದಿಂದ ಪಾರು!

Btv Kannada
Author: Btv Kannada

Read More