ಲಾರಿ ಚಲಿಸುತ್ತಿದ್ದಾಗಲೇ ಕುಸಿದು ಬಿದ್ದ ಸೇತುವೆ – ಚಾಲಕ ಪ್ರಾಣಾಪಾಯದಿಂದ ಪಾರು!

ಮೈಸೂರು : ಲಾರಿ ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ದಿಢೀರ್ ಸೇತುವೆ ಕುಸಿದಿದೆ. ಲಾರಿಯಲ್ಲಿದ್ದ ಲೋಡರ್ಸ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದಾಗಿದ್ದು, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಲಾರಿಯನ್ನು ಮೇಲೆತ್ತುವುದರ ಜೊತೆಗೆ ಮತ್ತೊಂದು ಲಾರಿ ಮೂಲಕ ಭತ್ತದ ಮೂಟೆಗಳನ್ನ ಕೊಂಡೊಯ್ಯಲು ಸ್ಥಳೀಯರು ನೆರವು ನೀಡಿದರು.

ಇದನ್ನೂ ಓದಿ : ಸಿಜರಿಯನ್ ವೇಳೆ ಆಸ್ಟ್ರಾ ಆಸ್ಪತ್ರೆ ವೈದ್ಯರ ಎಡವಟ್ಟು – ಬಾಣಂತಿ ಸಾವು!

Btv Kannada
Author: Btv Kannada

Read More