ವಾಷಿಂಗ್ಟನ್ : ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ನೇವಲ್ ಏರ್ ಸ್ಟೇಷನ್ ಲೆಮೂರ್ ಬಳಿಯ ಮೈದಾನದಲ್ಲಿ ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯ F-35C ಲೈಟ್ನಿಂಗ್ II ಸ್ಟೆಲ್ತ್ ಫೈಟರ್ ಜೆಟ್ ಪತನಗೊಂಡಿದೆ.
ಫ್ರೆಸ್ನೋ ಕೌಂಟಿಯ ಕ್ಯಾಡಿಲಾಕ್ ಮತ್ತು ಡಿಕಿನ್ಸನ್ ಅವೆನ್ಯೂ ಬಳಿಯ ಮೈದಾನದಲ್ಲಿ ಈ ಫೈಟರ್ ಜೆಟ್ ಅಪಘಾತಕ್ಕೀಡಾಗಿದೆ.ಲ್ಯಾಂಡಿಂಗ್ ವೇಳೆ ದುರ್ಘಟನೆ ಸಂಭವಿಸಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆದ ದೃಶ್ಯದಲ್ಲಿ ಉರಿಯುತ್ತಿರುವ ಅವಶೇಷಗಳಿಂದ ದಟ್ಟವಾದ ಹೊಗೆ ಮೇಲೇರುತ್ತಿರುವುದು ಕಂಡು ಬಂದಿದೆ. ಸಾವು ನೋವಿನ ಕುರಿತು ಇನ್ನು ಮಾಹಿತಿ ಲಭ್ಯವಾಗಿಲ್ಲ.
ಯುಎಸ್ ನೌಕಾಪಡೆಯ ಪ್ರಕಾರ, ಈ ವಿಮಾನವನ್ನು “ರಫ್ ರೈಡರ್ಸ್” ಎಂದು ಕರೆಯಲ್ಪಡುವ ಸ್ಟ್ರೈಕ್ ಫೈಟರ್ ಸ್ಕ್ವಾಡ್ರನ್ VF-125 ಗೆ ನಿಯೋಜಿಸಲಾಗಿತ್ತು. VF-125 ಒಂದು ಫ್ಲೀಟ್ ರಿಪ್ಲೇಸ್ಮೆಂಟ್ ಸ್ಕ್ವಾಡ್ರನ್ ಆಗಿದ್ದು, ಪೈಲಟ್ಗಳು ಮತ್ತು ಏರ್ಕ್ರ್ಯೂಗಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ವಂಚನೆ – ಕಾಂಗ್ರೆಸ್ ಮುಖಂಡ ಬಿ.ಗುರಪ್ಪ ನಾಯ್ಡು ಮೇಲೆ FIR.. ಪೊಲೀಸರಿಂದ ಶೋಧ!







