ಬರ್ಮಿಂಗ್ ಹ್ಯಾಮ್ : ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡುತ್ತಿದ್ದು, ಭಾರತ ನಾಯಕ ಶುಭ್ಮನ್ ಗಿಲ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.
ಬರ್ಮಿಂಗ್ ಹ್ಯಾಮ್ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 310 ರನ್ ಕಲೆಹಾಕಿದೆ. ಭಾರತದ ಪರ ನಾಯಕ ಶುಭ್ ಮನ್ ಗಿಲ್ ಶತಕ (114*) ಸಿಡಿಸಿದರೆ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (87 ರನ್) ಅರ್ಧಶತಕ ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಉತ್ತಮ ಸ್ಟಾರ್ಟ್ ಪಡೆಯಲಿಲ್ಲ. ಆರಂಭಿಕ ಆಟಗಾರ ರಾಹುಲ್ 2 ರನ್ ಗಳಿಸಿ ಔಟಾದರು. ಎರಡನೇ ವಿಕೆಟ್ಗೆ ಏಕದಿನ ಶೈಲಿಯಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕರುಣ್ ನಾಯರ್ ಬ್ಯಾಟ್ ಬೀಸಿ 90 ಎಸೆತಗಳಲ್ಲಿ 80 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.
ಕರುಣ್ ನಾಯರ್ 31 ರನ್ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್ 87 ರನ್(107 ಎಸೆತ, 13 ಬೌಂಡರಿ) ಹೊಡೆದು ಔಟಾದರು. ಆ ಬಳಿಕ ರಿಷಭ್ ಪಂತ್ 25 ರನ್ ಗಳಿಸಿದರೆ ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದ ಬೆನ್ನಲ್ಲೇ ನಾಯಕ ಗಿಲ್ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತುಕೊಂಡರು. ಗಿಲ್‌ಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದ್ದು, 6ನೇ ವಿಕೆಟಿಗೆ 124 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದ್ದಾರೆ. ನಾಯಕನಾಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಗಿಲ್ ಸತತ ಶತಕ ಸಿಡಿಸುವ ಮೂಲಕ ಭಾರತದ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಸಾಧನೆಯನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ : ಬೆಂಗಳೂರು ವಿವಿಗೆ ಡಾ. ಮನಮೋಹನ್ ಸಿಂಗ್ ಹೆಸರು – ಸಂಪುಟ ಸಭೆ ನಿರ್ಣಯ!
