ನಭಕ್ಕೆ ಹಾರಿದ ಶುಭಾಂಶು ಶುಕ್ಲಾ.. 40 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಭಾರತೀಯ ಗಗನಯಾತ್ರಿ!

ಬಾಹ್ಯಾಕಾಶ ಕ್ಷೇತದಲ್ಲಿ ಭಾರತ ಮತ್ತೊಂದು ದೊಡ್ಡ ಹೆಜ್ಜೆಯನ್ನಿಡಲು ಮುನ್ನುಡಿ ಸಿಕ್ಕಾಗಿದೆ. ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ್ದಾರೆ. ಈ ಮೂಲಕ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷ ಯಾನ ಆರಂಭವಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 12.01ಕ್ಕೆ ಆ್ಯಕ್ಸಿಯೋಂ ನೌಕೆ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿತು. ಶುಭಾಂಶು ಶುಕ್ಲಾ 40-41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇವತ್ತು ಮಧ್ಯಾಹ್ನ 12.01 ಗಂಟೆಗೆ ಸರಿಯಾಗಿ Axiom Mission 4)ಯನ್ನು ಹೊತ್ತು Falcon-9 rocket ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ನೌಕೆಯಲ್ಲಿ ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಇದ್ದಾರೆ.

ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್​ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಮಾಡಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ : ಶಿವಣ್ಣನ ಮನೆಗೆ ರೇಪಿಸ್ಟ್ ಮಡೆನೂರು ಮನುಗೆ ನೋ ಎಂಟ್ರಿ – ಮನುನನ್ನು ಮನೆಯೊಳಗೆ ಬಿಟ್ಟುಕೊಳ್ಳದ ನಟ!

Btv Kannada
Author: Btv Kannada

Read More