Download Our App

Follow us

Home » ಅಪರಾಧ » ಕಿರುತೆರೆ ನಟ ರವಿಕಿರಣ್ ವಿರುದ್ಧ ವಂಚನೆ ಆರೋಪ : ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ದೂರು..!

ಕಿರುತೆರೆ ನಟ ರವಿಕಿರಣ್ ವಿರುದ್ಧ ವಂಚನೆ ಆರೋಪ : ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ದೂರು..!

ಬೆಂಗಳೂರು : ಕಿರುತೆರೆ ನಟ ರವಿಕಿರಣ್ ಅವರು ಟೆಲಿವಿಷನ್ ಕಲ್ಚರಲ್ ಆ್ಯಂಡ್​ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕ್ಲಬ್ ಸದಸ್ಯರು ರವಿಕಿರಣ್ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರವಿಕಿರಣ್‌ ಹಲವು ವರ್ಷಗಳಿಂದ ಕ್ಲಬ್‌ನ ಕಾರ್ಯದರ್ಶಿಯಾಗಿದ್ದಾರೆ. ಕ್ಲಬ್​​ನ ಕಾರ್ಯದರ್ಶಿ ರವಿಕಿರಣ್ ಹಾಗೂ ಜಂಟಿ ಕಾರ್ಯದರ್ಶಿ ಉಮಾಶಂಕರ್ ಇಬ್ಬರ ವಿರುದ್ಧವೂ ಅಕ್ರಮದ ಆರೋಪ ಕೇಳಿ ಬಂದಿದೆ.

ಕ್ಲಬ್ ಅಭಿವೃದ್ದಿಗೆ 3 ಕೋಟಿ ಹಣ, ಒಂದು ಎಕರೆ ಜಮೀನು ನೀಡಲಾಗಿತ್ತು, ರವಿಕಿರಣ್ ಸ್ವಯಂ ನಿರ್ಣಯದಿಂದ ಕಟ್ಟಡ ಕಟ್ಟಿದ್ದಾರೆ ಎಂದು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ಕ್ಲಬ್​ ಸದಸ್ಯರು ದೂರು ನೀಡಿದ್ದಾರೆ.

ರವಿಕಿರಣ್‌ ಅವರ ಅವ್ಯವಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕ್ಲಬ್‌ನಲ್ಲಿ ಗಲಾಟೆ ನಡೆಸಿದ ಆರೋಪ ವ್ಯಕ್ತವಾಗಿದೆ. ಬಳಿಕ ಕ್ಲಬ್​ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಳೆದ 20 ವರ್ಷದಿಂದ ಕಿರುತೆರೆ ಕಲಾವಿದರಿಗಾಗಿ ಈ ಕ್ಲಬ್ ಇದೆ.

ಇದನ್ನೂ ಓದಿ : ದೇವದುರ್ಗ ಶಾಸಕಿ ಪುತ್ರ, ಸಹಚರರಿಂದ ಹಲ್ಲೆ ಪ್ರಕರಣ : ಹಲ್ಲೆಗೊಳಗಾದ ಪೊಲೀಸ್ ಕಾನ್ಸ್​ಟೇಬಲ್ ಸೇರಿ ಮೂವರ ವಿರುದ್ಧ FIR..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ನಟ ದರ್ಶನ್​​ಗೆ ಮತ್ತೆ ಸಂಕಷ್ಟ – ಆರ್​​.ಆರ್​​​ ನಗರ ​ಠಾಣೆಯಲ್ಲಿ ದೂರು ದಾಖಲು..!

ಬೆಂಗಳೂರು : ನಟ ದರ್ಶನ್‌ ವಿರುದ್ಧ ದೂರುಗಳ ಮೇಲೆ ದೂರು ದಾಖಲಾಗುತ್ತಿದೆ. ಇಂದು ಅವರ ಹೇಳಿಕೆ ಖಂಡಿಸಿ ಆರ್.ಆರ್ ನಗರ  ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಈ

Live Cricket

Add Your Heading Text Here