Download Our App

Follow us

Home » ಸಿನಿಮಾ » ಲೂಸ್ ಮಾದ ಯೋಗಿ ನಟನೆಯ ಸಿದ್ಲಿಂಗು-2 : ರಮ್ಯಾ ಮತ್ತು ಆಂಡಾಳಮ್ಮಇರ್ತಾರಾ..?

ಲೂಸ್ ಮಾದ ಯೋಗಿ ನಟನೆಯ ಸಿದ್ಲಿಂಗು-2 : ರಮ್ಯಾ ಮತ್ತು ಆಂಡಾಳಮ್ಮಇರ್ತಾರಾ..?

ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಚಿತ್ರಗಳ ಬಳಿಕ ಚೇಷ್ಠೆಗೆ ಫುಲ್ ಸ್ಟಾಪ್ ಇಟ್ಟಿರೋ ವಿಜಯ್ ಪ್ರಸಾದ್, ಸಿದ್ಲಿಂಗು ಸೀಕ್ವೆಲ್ ಸಿನಿಮಾನ ಕೈಗೆತ್ತಿಕೊಂಡಿದ್ದಾರೆ. ಲೂಸ್ಮಾದ ಯೋಗಿ ಜೊತೆಗೇನೇ ಸಿನಿಮಾ ಶುರು ಮಾಡ್ತಿರೋ ಪ್ರಸಾದ್, ಅಧಿಕೃತವಾಗಿ ನಿರ್ಮಾಪಕರ ಮನೆದೇವರ ಆಲಯದಲ್ಲಿ ಮುಹೂರ್ತ ಕೂಡ ನೆರವೇರಿಸಿದ್ರು. ಈ ಚಿತ್ರದಲ್ಲಿ ಮೋಹಕತಾರೆ ರಮ್ಯಾ ಮತ್ತು ಆಂಡಾಳಮ್ಮಇರ್ತಾರಾ..? ಡಬಲ್ ಮೀನಿಂಗ್ ಇರುತ್ತಾ ಇರಲ್ವಾ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ ಒಮ್ಮೆ ಓದಿ.

ಸಿದ್ಲಿಂಗು ಸಿನಿಮಾ ಬಂದು ಬರೋಬ್ಬರಿ 12 ವರ್ಷಗಳಾಯ್ತು. ಈ ಸಿನಿಮಾ ಇಂದಿಗೂ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಒಂದೊಳ್ಳೆ ಕಥೆ, ಸಂಬಂಧಗಳ ಮೌಲ್ಯಗಳು, ಕಾಮಿಡಿ, ಪ್ರೀತಿ, ಡೈಲಾಗ್ಸ್, ಸಾಹಿತ್ಯ, ಸಂಗೀತ ಹಾಗೂ ಮೇಕಿಂಗ್. ಹೌದು.. ಎಲ್ಲಾ ಆಂಗಲ್​​ನಿಂದ ಸಿದ್ಲಿಂಗು ವ್ಹಾವ್ ಫೀಲ್ ತರಿಸಿದ ಸಿನಿಮಾ ಆಗಿತ್ತು. ಇದೀಗ ಅದ್ರ ಸೀಕ್ವೆಲ್ ಸಿದ್ಲಿಂಗು-2 ಸೆಟ್ಟೇರಿದೆ.

ಜಮಾಲಿಗುಡ್ಡ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ಅವ್ರು ತಮ್ಮ ನಿಹಾರಿಕಾ ಫಿಲಂಸ್ ಬ್ಯಾನರ್​​ನಡಿ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ವಿಜಯ್ ಪ್ರಸಾದ್ ಅವರೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅಬ್ಬಿಗೆರೆ ಬಳಿ ಇರೋ ಶೆಟ್ಟಿಹಳ್ಳಿ ವಾರ್ಡ್​ನ ನಿವಾಸಿಯಾದ ಶ್ರೀಹರಿ ರೆಡ್ಡಿ ಅವ್ರ ಮನೆದೇವ್ರ ಆಲಯದಲ್ಲಿ ಸಿನಿಮಾ ಮುಹೂರ್ತ ಕಂಡಿದೆ. ಪೆಟ್ರೋಮ್ಯಾಕ್ಸ್ ಹಾಗೂ ತೋತಾಪುರಿ ಸಿನಿಮಾಗಳ ಬಳಿಕ ವಿಜಯ್ ಪ್ರಸಾದ್ ಅವರು ಡಬಲ್ ಮೀನಿಂಗ್ ಡೈಲಾಗ್ಸ್​ಗೆ ಕಡಿವಾಣ ಹಾಕಿ, ಹೊಸ ಹುರುಪು ಹುಮ್ಮಸ್ಸಿನಿಂದ ಸಿದ್ಲಿಂಗು-2 ಮಾಡೋಕೆ ಮುಂದಾಗಿದ್ದಾರೆ.

ಈ ಸಿನಿಮಾದಲ್ಲಿ ಬರೀ ಮೀನಿಂಗ್ ಇರಲಿದೆ, ಡಬಲ್ ಮೀನಿಂಗ್ ಇರಲ್ಲ ಅಂತ ವಿಜಯ್ ಪ್ರಸಾದ್ ಜನಕ್ಕೆ ಕೈ ಮುಗಿದರು. ಅಲ್ಲದೆ, ಯಾರೂ ನಂಬಲಾರದ ಸ್ಥಿತಿಯಲ್ಲಿದ್ದ ತನ್ನನ್ನ ನಂಬಿದ ಪ್ರೊಡ್ಯೂಸರ್​​ಗೆ ಥ್ಯಾಂಕ್ಸ್ ಹೇಳಿ, ಈ ಬಾರಿ 6ರಿಂದ 60 ವರ್ಷದ ಎಲ್ಲರೂ ನೋಡಬಹುದಾದ ಸಿನಿಮಾ ಕೊಡೋ ಭರವಸೆ ನೀಡಿದ್ರು. ನಾಯಕನಟ ಲೂಸ್ಮಾದ ಯೋಗಿ ಅವರು, ಇದು ನನ್ನ ಕರಿಯರ್​​ಗೆ ಮಹತ್ವದ ತಿರುವು ಕೊಟ್ಟ ಸಿನಿಮಾ. ಹಾಗಾಗಿ ಅದ್ರ ಸೀಕ್ವೆಲ್ ಬರ್ತಿರೋದು ಖುಷಿಯ ವಿಚಾರ. ಹದಿನೈದು ವರ್ಷದ ಗೆಳತಿ ಸೋನು ಗೌಡ ಜೊತೆ ಇಲ್ಲಿಯವರೆಗೂ ಸಿನಿಮಾ ಮಾಡೋ ಅವಕಾಶಗಳು ಸಿಗಲೇ ಇಲ್ಲ. ಇದೀಗ ಒಟ್ಟಿಗೆ ಕೆಲಸ ಮಾಡ್ತಿರೋದು ಸಂತೋಷವಾಗ್ತಿದೆ. ರಮ್ಯಾ ಅವ್ರು ಇರಲ್ಲ, ಆಂಡಾಳಮ್ಮನನ್ನ ಬಿಡಲ್ಲ ಅಂದ್ರು.

ಕಿರಗೂರಿನ ಗಯ್ಯಾಳಿಗಳು ಸಿನಿಮಾದ ಪಾತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಡೈರೆಕ್ಟರ್, ಸಿದ್ಲಿಂಗು-2ಗೆ ಆಫರ್ ಮಾಡಿದ್ದು ನಿಜಕ್ಕೂ ಸರ್ಪ್ರೈಸ್ ಅಂದ್ರು ಸೋನು ಗೌಡ. ಕಲಾವಿದೆಯಾಗಿ ನಾನು ಕೊಟ್ಟ ಪಾತ್ರಕ್ಕೆ ಜೀವ ತುಂಬುತ್ತೇನೆ ಅಂತ ಅವಕಾಶ ನೀಡಿದ ಡೈರೆಕ್ಟರ್​​ಗೆ ಧನ್ಯವಾದ ಹೇಳಿ, ಯೋಗಿ ಬಗ್ಗೆನೂ ಕೊಂಡಾಡಿದ್ರು. ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿರಲಿದ್ದು, ಪದ್ಮಜಾ ರಾಜ್, ಆಂಟೊನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿರಲಿದೆ. ಮುಂದಿನ ವಾರದಿಂದ ಶೂಟಿಂಗ್ ಶುರುವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಟೀಂ ನಿರ್ಧರಿಸಿದೆ.

 

ಇದನ್ನೂ ಓದಿ : ನಟ ಶಿವರಾಜ್ ಕುಮಾರ್‌ ಸಿನಿಮಾ, ಜಾಹೀರಾತು ತಡೆ ಕೋರಿ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು..!

Leave a Comment

DG Ad

RELATED LATEST NEWS

Top Headlines

ಸ್ಟಾರ್ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧ ನಡೆಯುತ್ತಿದ್ಯಾ ಪಿತೂರಿ?

ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ನಿರ್ಮಾಪಕರಿಂದ 2.5 ಕೋಟಿ ರೂಪಾಯಿ ಪಡೆದು ಡಿಜಿಟಲ್ ಟೆರೆನ್ ಸಂಸ್ಥೆ ಗ್ರಾಫಿಕ್ಸ್

Live Cricket

Add Your Heading Text Here