Download Our App

Follow us

Home » ರಾಜ್ಯ » ನಟ ಶಿವರಾಜ್ ಕುಮಾರ್‌ ಸಿನಿಮಾ, ಜಾಹೀರಾತು ತಡೆ ಕೋರಿ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು..!

ನಟ ಶಿವರಾಜ್ ಕುಮಾರ್‌ ಸಿನಿಮಾ, ಜಾಹೀರಾತು ತಡೆ ಕೋರಿ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು..!

ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರಚಾರಕ್ಕಾಗಿ ಸ್ಟಾರ್‌ ನಟರನ್ನು ಕರೆತರುತ್ತದೆ. ನಟ ಶಿವರಾಜ್ ಕುಮಾರ್‌ ಅವರ ಪತ್ನಿ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಪತ್ನಿಯೊಟ್ಟಿಗೆ ಚುನಾವಣಾ ಪ್ರಚಾರ ಕಣಕ್ಕೆ ಇಳಿದಿದ್ದಾರೆ.

ಹಾಗಾಗಿ ನಟ ಶಿವರಾಜ್ ಕುಮಾರ್‌ ನಟಿಸಿರುವ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಮನವಿ ಮಾಡಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಹಿಂದುಳಿದ ವರ್ಗಗಳ ಮೋರ್ಚಾದಿಂದ ದೂರು ಸಲ್ಲಿಕೆಯಾಗಿದೆ.

ಶಿವರಾಜ್ ಕುಮಾರ್ ನಾಯಕ‌ ನಟನಾಗಿರುವ ಹಿನ್ನೆಲೆಯಿಂದಾಗಿ ಮತದಾರರ ಮೇಲೆ ಪ್ರಭಾವ ಬೀರಲಿದೆ. ಅವರ ಜನಪ್ರಿಯತೆ ಮತ್ತು ಚಲನಚಿತ್ರಗಳು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಕುಮಾರ್ ನಟನೆಯ ಚಿತ್ರ ಪ್ರಸಾರಕ್ಕೆ ತಡೆ ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ದೂರು ನೀಡಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಿಂದ ಎಸ್​.ಆರ್ ವಿಶ್ವನಾಥ್​ಗೆ ಟಿಕೆಟ್ ಕೊಡಿ – ಬಿಜೆಪಿ ಕಾರ್ಯರ್ತರಿಂದ ಆಗ್ರಹ..!

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here