ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಮೂಲದ ಯುವಕ ರೇಣುಕಾಸ್ವಾಮಿ ಮೃತ ಯುವಕ.
ಆಗಿದ್ದು ಏನು..? ಡಿಸಿಪಿ ಗಿರೀಶ್ ನೇತೃತ್ವದ ತಂಡದಿಂದ ದರ್ಶನ್ ಬಂಧನವಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ಚಾಲೆಂಜಿಂಗ್ ಸ್ಟಾರ್ ಅವರನ್ನು ಬಂಧಿಸಲಾಗಿದೆ. ಪವಿತ್ರಾಗೌಡ ವಿರುದ್ಧ ಅಶ್ಲೀಲ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಆತನಿಗೆ ದರ್ಶನ್ ಹೊಡೆದಿದ್ದರು. ಹೊಡೆದ ಏಟಿಗೆ ಯುವಕ ಗಂಭಿರವಾಗಿ ಗಾಯಗೊಂಡಿದ್ದನು. ಹರಿದಾಡುತ್ತಿರುವ ಮಾಹಿತಿಯಂತೆ ದರ್ಶನ್ ಹೊಡೆಯುವ ಬರದಲ್ಲಿ ಯುವಕನ ಮರ್ಮಾಂಗಕ್ಕೆ ಒದ್ದಿದ್ದರು.
ಒದ್ದ ಬೆನ್ನಲ್ಲೇ ಯುವಕ ಆಯತಪ್ಪಿ ನೆಲಕ್ಕೆ ಬಿದ್ದಿದ್ದ. ನೆಲದ ಮೇಲೆ ಬಿದ್ದ ಯುವಕ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದೂ ದರ್ಶನ್, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
ರೇಣುಕಾಸ್ವಾಮಿ ಚಿತ್ರದರ್ಗದ ಅಪೋಲೋ ಫಾರ್ಮಸಿ ನೌಕರನಾಗಿದ್ದ. ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ಹಿನ್ನೆಲೆ ಜೂನ್ 9ರಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. IPC-302(ಕೊಲೆ) ಮತ್ತು 201ರ(ಸಾಕ್ಷಿನಾಶ) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ದರ್ಶನ್ ವಿರುದ್ಧ ಕೇವಲ್ರಾಮ್ ದೋರ್ಜಿ ಎಂಬುವರು ದೂರು ನೀಡಿದ್ದರು. CCTV ಕ್ಯಾಮೆರಾ ದೃಶ್ಯ ಆಧರಿಸಿ ಗಿರಿನಗರ ಹುಡುಗರನ್ನು ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಗಿರಿನಗರ ಹುಡುಗರು ದರ್ಶನ್ ಹೆಸರು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ : ಮರ್ಡರ್ ಕೇಸ್ನಲ್ಲಿ ನಟ ದರ್ಶನ್ ಅರೆಸ್ಟ್..!