ಸೈಬರ್‌ ವಂಚಕರಿಂದ ಕಾವೇರಿ 2.0 ಸಾಫ್ಟ್​ವೇರ್ ಹ್ಯಾಕ್ – ಅಪರಿಚಿತರ ವಿರುದ್ಧ FIR!

ಬೆಂಗಳೂರು : ಆಸ್ತಿ ಖರೀದಿ, ಮಾರಾಟ ಸೇರಿ ನೋಂದಣಿ ಪ್ರಕ್ರಿಯೆಗೆ ಬಳಸುವ ಕಾವೇರಿ 2.0 ಸಾಫ್ಟ್​​​​ವೇರ್​ನ್ನು ಅಪರಿಚಿತರು ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ರಾಜ್ಯ ನೋಂದಣಿ & ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ.ದಯಾನಂದ್​ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಂದ್ರ ಸೆನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸರ್ವರ್ ಸಮಸ್ಯೆೆಯಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಕಾರ್ಯ ಸ್ಥಗಿತಗೊಂಡಿತ್ತು. ಈ ಹಿನ್ನೆೆಲೆಯಲ್ಲಿ ಐಜಿಆರ್ ಪರಿಶೀಲಿಸಿದಾಗ ದುರುದ್ದೇಶದಿಂದ ಅಪರಿಚಿತರು ಕಾವೇರಿ 2.0 ಸಾಫ್ಟ್​​ವೇರ್ ಅನ್ನು ಹ್ಯಾಕ್ ಮಾಡಿ, ವೆಬ್‌ಸೈಟ್ ಪ್ರವೇಶಿಸಿ ಅದರಲ್ಲಿರುವ ಡೇಟಾಗಳನ್ನು ಕಳವು ಮಾಡಲು ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆಯಾಗಿದೆ. ಈ ಕುರಿತು ಸ್ಮಾರ್ಟ್ ಗವರ್ನನೆನ್ಸ್ ಸೆಂಟರ್ (ಸಿಎಸ್‌ಜಿ) ಈ ರೀತಿಯ 62 ಇ-ಮೇಲ್ ಖಾತೆಗಳು ಹಾಗೂ ಅವುಗಳ ಐಪಿ ವಿಳಾಸಗಳ ಪಟ್ಟಿಯನ್ನು ನೀಡಿದೆ.

ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಎ.ದಯಾನಂದ್

ಇನ್ನು ವೆಬ್‌ಸೈಟ್ ಹ್ಯಾಕ್ ಮಾಡಿದ ಅಪರಿಚಿತರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಮುದ್ರಾಂಕ ಇಲಾಖೆ ಆಯುಕ್ತ ದಯಾನಂದ್ ಅವರು ದೂರು ನೀಡಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ​ಕೈಗೊಂಡಿದ್ದಾರೆ.  

Btv Kannada
Author: Btv Kannada

Leave a Comment

Read More