ನಾನು 4 ವರ್ಷಗಳಿಂದ ಖಾಲಿ ಇದ್ದೇನೆ – ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ IPS ಅಧಿಕಾರಿ ರವಿ ಚನ್ನಣ್ಣನವರ್!

ದಾವಣಗೆರೆ : ನಾನು ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇದ್ದೇನೆ. ಯಾವುದೇ ಕೆಲಸವಿಲ್ಲ ಎಂದು ಐಪಿಎಸ್ ಅಧಿಕಾರಿ, ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಡಿಐಜಿಪಿ ಆಗಿರುವ ರವಿ ಚನ್ನಣ್ಣನವರ್ ಪರೋಕ್ಷವಾಗಿ ಸರ್ಕಾರ ವಿರುದ್ಧ ಬೇಸರ ಹೊರಹಕಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಜಾತ್ರಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ನಾನು ಕಳೆದ ನಾಲ್ಕು ವರ್ಷಗಳಿಂದ ಖಾಲಿ ಇದ್ದೇನೆ, ಖಾಲಿ ಇದ್ದೇನೆ.. ಖಾಲಿ ಇದ್ದೇನೆ ಎಂದು ಮೂರು ಸಲ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇನ್ನು ರವಿ ಚನ್ನಣ್ಣನವರ್ ತಮ್ಮ ಭಾಷಣದಲ್ಲಿ ‘ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಉನ್ನತ ಹುದ್ದೆ ನೀಡದೇ ಸರ್ಕಾರ ನಿರ್ಲಕ್ಶ್ಯ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು, ರವಿ ಚನ್ನಣ್ಣನವರ್​ಗೆ ಸಮಾಧಾನ ಹೇಳಿದ್ದಾರೆ.

‘ನಮ್ಮ ಸರ್ಕಾರ ಇದ್ದಾಗ ರವಿ ಚನ್ನಣ್ಣನವರ್​ರನ್ನು ನಾವು ಚೆನ್ನಾಗಿ ನಡೆಸಿಕೊಂಡಿದ್ದೆವು. ಆದ್ರೆ ಈಗ ತೊಂದರೆ ಆಗಿರಬೇಕು. ಹೀಗಾಗಿ ಖಾಲಿ ಖಾಲಿ ಎನ್ನುತ್ತಿದ್ದಾರೆ. ರವಿ ಚನ್ನಣ್ಣನವರ್ ಯೆಸ್ ಎಂದ್ರೆ ಸಾಕು ನಾನು ಕೇಂದ್ರ ಸರ್ಕಾರದ ಸೇವೆಗೆ ತೆಗೆದುಕೊಳ್ಳುತ್ತೇನೆ ಎಂದು ವೇದಿಕೆಯಲ್ಲಿಯೇ ವಿ. ಸೋಮಣ್ಣ ಭರವಸೆ ನೀಡಿದ್ದಾರೆ. ಹಾಗೆಯೇ ತಾಳ್ಮೆ ಇರಲಿ ಪ್ರತಿಭೆಯೇ ಮಾನದಂಡ. ಅವಕಾಶ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದು ಸಮಾಧಾನ ಪಡಿಸಿದ್ದಾರೆ.

Btv Kannada
Author: Btv Kannada

Leave a Comment

Read More