ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್.. ನಾಳೆಯಿಂದ ನಮ್ಮ ಮೆಟ್ರೋ ದರ 46% ಏರಿಕೆ!

ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ BMRCL ಬಿಗ್‌ ಶಾಕ್‌ ನೀಡಿದೆ. ʼನಮ್ಮ ಮೆಟ್ರೋʼ ಪ್ರಯಾಣ ದರವನ್ನು ಕೊನೆಗೂ ಏರಿಕೆ ಮಾಡಿದ್ದು, ಈ ಬಗ್ಗೆ ಇಂದು BMRCL ಟ್ವಿಟರ್‌ ಖಾತೆಯಲ್ಲಿ ಅಧಿಕೃತ ಆದೇಶವನ್ನು ಪ್ರಕಟಿಸಿದೆ.  

ʼನಮ್ಮ ಮೆಟ್ರೋʼ ಪ್ರಯಾಣ ದರವನ್ನು ಶೇ.46ರಷ್ಟು ಏರಿಕೆ ಮಾಡಲಾಗಿದೆ. ಪ್ರಯಾಣ ದರವನ್ನ ಕನಿಷ್ಠ 10 ರೂ.ನಿಂದ 90 ರೂ.ವರೆಗೆ ಏರಿಕೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚಿಸಲು ವಿಶೇಷ ಸಭೆಗಳು ನಡೆದಿದ್ದವು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರವು ಏರಿಕೆಯಾಗಿದೆ.

ಈ ಹಿಂದಿನ ದರದಲ್ಲಿ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 60 ರೂಪಾಯಿ ಇತ್ತು. ಇದೀಗ ಮಿನಿಮಮ್ 10 ರೂಪಾಯಿ ಇಂದ ಮ್ಯಾಕ್ಸಿಮಮ್ 90 ರೂಪಾಯಿ ಆಗಿದೆ. ನಾಳೆಯಿಂದ ಬೆಂಗಳೂರಲ್ಲಿ ನಮ್ಮ ಮೆಟ್ರೋ ದರ ಏರಿಕೆ ಆಗುತ್ತಿದ್ದು, ಪರಿಷ್ಕೃತ ದರ ಪಟ್ಟಿಯ ಮಾಹಿತಿ ಇಲ್ಲಿದೆ.

ಕಿ.ಮೀ – ಟಿಕೆಟ್ ದರ
0-2 KM – 10 ರೂಪಾಯಿ
2-4KM – 20 ರೂಪಾಯಿ
4-6KM – 30 ರೂಪಾಯಿ
6-8KM – 40 ರೂಪಾಯಿ
8-10KM – 50 ರೂಪಾಯಿ
10-15KM – 60 ರೂಪಾಯಿ
15-20KM – 70 ರೂಪಾಯಿ
20-25KM – 80 ರೂಪಾಯಿ
25-30KM – 90 ರೂಪಾಯಿ

ಇದನ್ನೂ ಓದಿ : http://ಕ್ಯಾಸಿನೋದಲ್ಲಿ ಹೂಡಿಕೆ‌ ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ – ಸ್ಯಾಂಡಲ್​ವುಡ್ ಡ್ರಗ್ ಕೇಸ್ ಆರೋಪಿ ವಿರುದ್ಧ FIR!

Btv Kannada
Author: Btv Kannada

Leave a Comment

Read More