ಕುಂಭಮೇಳದಲ್ಲಿ ಸ್ನಾನ ಮಾಡಿದ್ರೂ ಪಾಪ ಹೋಗಿಲ್ಲ- ಶಾಸಕ ಸುರೇಶ್ ಗೌಡ ವಿರುದ್ಧ ಗೌರಿಶಂಕರ್ ವಾಗ್ದಾಳಿ!

ತುಮಕೂರು : ಹಾಲಿ ಶಾಸಕರ ವಿರುದ್ದ ಮಾಜಿ ಶಾಸಕ ಗುಡುಗಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ಟೀಕಿಸುವ ಭರದಲ್ಲಿ ಅವಾಚ್ಯ ಶಬ್ಧ ಬಳಸಿ ಮಾಜಿ ಶಾಸಕ ಗೌರಿಶಂಕರ್ ವಾಗ್ಧಾಳಿ ನಡೆಸಿದ್ದಾರೆ.

ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಡಿ ಸಿ ಗೌರಿಶಂಕರ್, ಚುನಾವಣೆಗೂ ಮುನ್ನ ನೀಡಿದ ಒಂದೂ ಭರವಸೆ ಈಡೇರಿಸಿಲ್ಲ, ಒಂದು ಭರವಸೆ ಈಡೇರಿಸಕಾಗದ ಶಾಸಕ ಸುರೇಶ್ ಗೌಡ ಎಂದು ಏಕವಚನದಲ್ಲಿ ಟೀಕಿಸಿದ್ದಾರೆ.

ಮೊನ್ನೆ ಪ್ರಯಾಗ್ ರಾಜ್​ಗೆ ಹೋಗಿ ಸ್ನಾನ ಮಾಡಿಕೊಂಡು ಬಂದಿದ್ದಾರೆ, ಪಾಪಗಳನ್ನೆಲ್ಲ, ಮಾಡಿರುವ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಬರ್ತಾರೆ, ಇನ್ನು ಮುಂದೆ ಒಳ್ಳೆಯವನಗುತ್ತಾನೆ, ಒಳ್ಳೆ ಬುದ್ದಿ ಕಲಿತಾನೆ, ಜನಗಳಿಗೆ ಗೌರವ ಕೊಡತಾನೆ, ಒಳ್ಳೆ ಕೆಲಸ ಮಾಡ್ತಾನೆ ಅನ್ಕೊಂಡೆ. ಆದರೆ ಎಲ್ಲ ಉಲ್ಟಾ ಆಗಿದೆ ಪ್ರಯಾಗ್ ರಾಜ್ ಹೋಗಿ ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಂದಮೇಲೆ ಪಾಪ ಜಾಸ್ತಿ ಮಾಡ್ತಿದ್ದಾನೆ ಎಂದು ಮಾಜಿ ಶಾಸಕ ಗೌರಿಶಂಕರ್ ಕಿಡಿ ಕಾರಿದ್ದಾರೆ.

ಎಲ್ಲೋ ಒಂದು ಕಡೆ ಆತನಿಗೆ ಶಾಪ ವಿಮೋಚನೆ ಆಗಿಲ್ಲ, ಮತ್ತೊಂದು ಕಡೆ ಸುರೇಶ್ ಗೌಡನಿಗೆ ಆ ಕುಂಭಮೇಳ ಸಕ್ಸಸ್ ಆಗಿಲ್ಲ ಅಂತ ಕಾಣ್ತದೆ. ಕರ್ನಾಟಕ ರಾಜ್ಯದಲ್ಲಿ ಕುಂಭ ಮೇಳ ಮಾಡ್ಲಿಕ್ಕೆ ಹೊರಟಿದ್ದಾರೆ ನಮ್ಮ ಸರ್ಕಾರದವರು. ತಲಕಾಡಿನಲ್ಲಿ ಮಾಡಲಿಕ್ಕೆ ಹೊರಟಿದಾರೆ, ಅಲ್ಲಾದ್ರೂ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪಾಪ ತೊಳೆದು ಕೋಳ್ತಾರ ಅಂತ ಕಾದು ನೋಡಬೇಕು.

ಸುಳ್ಳು ಹೇಳೋದು ಕಮ್ಮಿ ಮಾಡಲಿಲ್ಲ ಅಂದ್ರೆ, ನಾನೇ ಒಂದು ಕಾರು ಕೊಟ್ಟು ಕಾವೇರಿ ನದಿಗೆ ಕರ್ಕೊಂಡು ಹೋಗಿ, ಆ ಕಾವೇರಿ ನೀರಲ್ಲಿ ಮೂರು ಸರಿ ಮುಳುಗಿಸಿ ಕರ್ಕೊಂಡು ಬರ್ತೀನಿ. ಈ ಜಿಲ್ಲೆಯ ಒಳಿತಿಗಾಗಿ, ನಮ್ಮ ಕ್ಷೇತ್ರದ ಜನತೆಗಾಗಿ ರಿಕ್ವೆಸ್ಟ್ ಮಾಡಿ ಕೊಳ್ಳುತ್ತೇನೆ ಎಂದು ಶಾಸಕ ಬಿ. ಸುರೇಶ್ ಗೌಡ ವಿರುದ್ಧ ಮಾಜಿ ಶಾಸಕ ಡಿ. ಸಿ ಗೌರಿಶಂಕರ್ ಹಿಗ್ಗಾ ಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : http://KSRTC ಬಸ್-ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!

Btv Kannada
Author: Btv Kannada

Leave a Comment

Read More