ನಟಿ ಜಯಮಾಲಾ ಪುತ್ರಿ ಕಲ್ಯಾಣೋತ್ಸವದಲ್ಲಿ ಸ್ಯಾಂಡಲ್​ವುಡ್ ಗಣ್ಯರು ಭಾಗಿ!

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ವಿವಾಹ ರುಷಭ್ ಅವರೊಂದಿಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.

ಎರಡೂ ಕುಟುಂಬದ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್​ವುಡ್​ನ ಸಾಕಷ್ಟು ಗಣ್ಯರು ಆಗಮಿಸಿ ಶುಭಕೋರಿದರು.

ಮದುವೆಗೆ ಕಿಚ್ಚ ಸುದೀಪ್, ಯಶ್, ಗಣೇಶ್‌, ರಮೇಶ್ ಅರವಿಂದ್ ಸೇರಿದಂತೆ ಸ್ಯಾಂಡಲ್​ವುಡ್​​ನ ಅನೇಕ ಕಲಾವಿದರು, ತಂತ್ರಜ್ಞರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.

ಇದನ್ನೂ ಓದಿ : http://ಪ್ರೇಮಿಗಳ ದಿನದಂದು ಪೃಥ್ವಿ ಅಂಬಾರ್, ಪ್ರಮೋದ್ ನಟನೆಯ ‘ಭುವನಂ ಗಗನಂ’ ಚಿತ್ರ ತೆರೆಗೆ!

Btv Kannada
Author: Btv Kannada

Leave a Comment

Read More