Download Our App

Follow us

Home » ಅಪರಾಧ » ಮಂಗಳೂರು ಸ್ಕೂಲ್​​ ಬಳಿ ಪ್ರತಿಭಟನೆ ಪ್ರಕರಣ : MLA ವೇದವ್ಯಾಸ ಕಾಮತ್​ ಸೇರಿ 6 ಮಂದಿ ವಿರುದ್ಧ FIR..!

ಮಂಗಳೂರು ಸ್ಕೂಲ್​​ ಬಳಿ ಪ್ರತಿಭಟನೆ ಪ್ರಕರಣ : MLA ವೇದವ್ಯಾಸ ಕಾಮತ್​ ಸೇರಿ 6 ಮಂದಿ ವಿರುದ್ಧ FIR..!

ಮಂಗಳೂರು : ಮಂಗಳೂರಿನ ವೆಲೆನ್ಸಿಯಾದ ಸೇಂಟ್​ ಜೆರೋಸಾ ಸ್ಕೂಲ್​ ಮುಂದೆ ಪ್ರತಿಭಟನೆ ಮಾಡಿದ್ದ ಬಿಜೆಪಿಯ ಇಬ್ಬರು ಶಾಸಕರು ಸೇರಿ 6 ಮಂದಿ ವಿರುದ್ಧ FIR ದಾಖಲಾಗಿದೆ.

ಶಾಸಕರಾದ ಡಾ.ವೇದವ್ಯಾಸ ಕಾಮತ್​​​, ಡಾ.ಭರತ್​ ಶೆಟ್ಟಿ, ವಿಶ್ವ ಹಿಂದೂ ಪರಿಷತ್​​ ಪ್ರಾಂತ ಸಹ ಕಾಯವಾಹ ಶರಣು ಪಂಪ್​ವೆಲ್​​, ಕಾರ್ಪೊರೇಟರ್​​ಗಳಾದ ಸಂದೀಪ್​​ ಗರೋಡಿ, ಭರತ್​ ಕುಮಾರ್​​​ ವಿರುದ್ಧ FIR ದಾಖಲು ಮಾಡಲಾಗಿದೆ. ವೇದವ್ಯಾಸ ಕಾಮತ್​​ A-1 ಮಾಡಲಾಗಿದೆ.

ಸೇಂಟ್​ ಜೆರೋಸಾ ಸ್ಕೂಲ್​ ಶಿಕ್ಷಕಿ ಸಿಸ್ಟರ್​​ ಪ್ರಭಾ ಹಿಂದೂ ದೇವರನ್ನು ಅಪಮಾನಿಸಿದ್ದರು ಎಂದು ಆರೋಪಿಸಿ ಶಿಕ್ಷಕಿ ವಜಾ ಮಾಡುವಂತೆ ಹಿಂದೂ ಸಂಘಟನೆ ಮತ್ತು ಬಿಜೆಪಿ ಶಾಸಕರು ಪ್ರತಿಭಟನೆ ಮಾಡಿದ್ರು. ಸ್ಕೂಲ್​​ ಗೇಟ್​ ಮುಂದೆ ಅಕ್ರಮವಾಗಿ ಜಮಾಯಿಸಿ ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದಲ್ಲದೇ ಕ್ರೈಸ್ತ ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂದು ಅನಿಲ್​​ ಜೆರಾಲ್ಡ್ ಲೋಬೋ ಎಂಬುವವರು ಮಂಗಳೂರು ದಕ್ಷಿಣ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

ಹಾಗಾಗಿ 6 ಮಂದಿಯ ವಿರುದ್ಧ ಐಪಿಸಿ-185, 143, 153 ಎ, 295 ಎ, 505(2), 506, 149ರ ಅಡಿ FIR ದಾಖಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಗೆ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ. ಇದು ಕ್ರೈಸ್ತ್ರ-ಹಿಂದೂ ಧರ್ಮದ ನಡುವೆ ಗಲಭೆ ಉಂಟು ಮಾಡುವ ಪ್ರಚೋದನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆಗೆ 5ನೇ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕೆ..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here