ಬೆಂಗಳೂರು : ರಾಜ್ಯಸಭೆ ಚುನಾವಣಾ ಅಖಾಡಕ್ಕೆ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿ ಸ್ಪರ್ಧೆ ಬಗ್ಗೆ ಘೋಷಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಸ್ಪರ್ಧಿಸಲಿದ್ದಾರೆ.
ಕುಪೇಂದ್ರ ರೆಡ್ಡಿ ಸ್ಪರ್ಧೆ ಘೋಷಣೆ ನಂತರ ಕಾಂಗ್ರೆಸ್ನ ಲೆಕ್ಕಾಚಾರ ಹೆಚ್ಚಾಗಿದೆ. ಮೂರನೇ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ಹೊಸಾ ಪ್ಲಾನ್ ಮಾಡ್ತಿದೆ. ಮೂರನೇ ಅಭ್ಯರ್ಥಿಗೆ ಒಂದು ಅಥವಾ ಎರಡು ಮತ ಕೊರತೆ ಆಗಬಹುದು, ಹೀಗಾಗಿ ಮತಗಳ ಕ್ರೋಢೀಕರಣಕ್ಕೆ ಕಾಂಗ್ರೆಸ್ ಪ್ಲಾನ್ ಮಾಡ್ತಿದೆ.
ಜೆಡಿಎಸ್, ಬಿಜೆಪಿಯಿಂದಲೇ ಕೆಲವರ ಸೆಳೆಯೋ ಪ್ಲಾನ್ ಮಾಡ್ತಿದ್ದಾರೆ.
ರಾಜ್ಯದ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಗಳ ಆಯ್ಕೆಯಾಗಿದೆ. ಕಾಂಗ್ರೆಸ್ನಿಂದ ಮೂರು, ಬಿಜೆಪಿಯಿಂದ ಒಬ್ಬರ ಹೆಸರು ಘೋಷಣೆಯಾಗಿದ್ದು, ಒಬ್ಬ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು 45 ಮತಗಳ ಅಗತ್ಯ ಇದೆ.
ಕಾಂಗ್ರೆಸ್ ಬಳಿ 135 ಶಾಸಕರಿದ್ದಾರೆ, ಮೂವರ ಆಯ್ಕೆ ಸಲೀಸಾಗಿದ್ದು, ಬಿಜೆಪಿ ಬಳಿ 66 ಶಾಸಕರಿದ್ದು ಒಬ್ಬರ ಆಯ್ಕೆ ಸುಗಮವಾಗಿದೆ. ಬಿಜೆಪಿ ಬಳಿ 19, ಜೆಡಿಎಸ್ ಬಳಿ 19 ಶಾಸಕರು ಉಳಿಯಲಿದ್ದಾರೆ, ಇಬ್ಬರು ಪಕ್ಷೇತರರು, ಕಾಂಗ್ರೆಸ್ನ ಅಸಮಾಧಾನಿತರ ಬೆಂಬಲದ ತಂತ್ರ ರೂಪಿಸಲಿದ್ದಾರೆ. ಇದೀಗ ಕೊನೆ ಕ್ಷಣದಲ್ಲಿ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿಯೋದು ಫಿಕ್ಸ್ ಆಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳು : ಕಾಂಗ್ರೆಸ್ನಿಂದ ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ದೆಹಲಿಯ ಕಾಂಗ್ರೆಸ್ ನಾಯಕ ಅಜಯ್ ಮಕೇನ್, ಈಗಾಗಲೇ ರಾಜ್ಯಸಭೆ ಸದಸ್ಯರಾಗಿರುವ ಡಾ.ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ. ಇಂದು ಕಾಂಗ್ರೆಸ್ನ ಮೂವರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಗೋಲ್ಡ್ ಕಂಪನಿಗೆ ನುಗ್ಗಿ ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ನಗದು ದೋಚಿದ ಖತರ್ನಾಕ್ ಕಳ್ಳರು..!