ಕೇರಳದ ಗಡಿ ದಾಟಿ ಹೋಗಿದ್ದ ಕರ್ನಾಟಕದ ಆನೆಯೊಂದು ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಸಾವನ್ನಪ್ಪಿದೆ. ತನ್ನೀರ್ ಕೊಂಬನ್ ಎಂಬ ಆನೆ ಕೇರಳದ ಮಾನಂದವಾಡಿ ಗಡಿಗೆ ಎಂಟ್ರಿ ಕೊಟ್ಟಿತ್ತು.
ಅದನ್ನು ವಯನಾಡಿನಲ್ಲಿ ಸೆರೆ ಹಿಡಿಯುವ ವೇಳೆ ಕೇರಳದ ಅರಣ್ಯಾಧಿಕಾರಿಗಳು ಬಹಳ ಟಾರ್ಚರ್ ನೀಡಿರೋ ಆರೋಪ ಕೇಳಿ ಬಂದಿದೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಗಜರಾಜನನ್ನು ಆಂಬುಲೆನ್ಸ್ನಲ್ಲಿ ಬಂಡೀಪುರ ಅರಣ್ಯಕ್ಕೆ ತಂದು ಬಿಡಲಾಗಿತ್ತು.
ಇದಾದ ಕೆಲವೇ ಗಂಟೆ ಆನೆ ಕೊನೆಯುಸಿರೆಳೆದಿದೆ. ಇನ್ನು ಆನೆಯ ಸಾವಿಗೆ ಕೇರಳ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ವೇಳೆ ಕೊಟ್ಟಿರೋ ಹಿಂಸೆಯೇ ಕಾರಣ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.
ಇದನ್ನೂ ಓದಿ : ನಾವು ಬೇರೆ ಜಾತಿಯವರು ಅನ್ನೋ ಕಾರಣಕ್ಕೆ ಬಾಗೂರು ಚನ್ನಕೇಶವ ದೇಗುಲದ ವಳಗೆ ಪ್ರವೇಶ ನೀಡಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ..!
Post Views: 39