Download Our App

Follow us

Home » ಜಿಲ್ಲೆ » ನಾವು ಬೇರೆ ಜಾತಿಯವರು ಅನ್ನೋ ಕಾರಣಕ್ಕೆ ಬಾಗೂರು ಚನ್ನಕೇಶವ ದೇಗುಲದ ವಳಗೆ ಪ್ರವೇಶ ನೀಡಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ..!

ನಾವು ಬೇರೆ ಜಾತಿಯವರು ಅನ್ನೋ ಕಾರಣಕ್ಕೆ ಬಾಗೂರು ಚನ್ನಕೇಶವ ದೇಗುಲದ ವಳಗೆ ಪ್ರವೇಶ ನೀಡಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ..!

ಚಿತ್ರದುರ್ಗ : ಬಾಗೂರು ಗ್ರಾಮದ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿದಾಗ ಜಾತಿ ಕಾರಣಕ್ಕೆ ನಮ್ಮನ್ನ ದೇವಸ್ಥಾನದ ಗರ್ಭಗುಡಿಯ ಒಳಗೆ ಬಿಟ್ಟಿರಲಿಲ್ಲ ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ನಡೆದ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ʻಪರಿವರ್ತನೆಯ ಹಾದಿಯಲ್ಲಿ ಮಠಗಳುʼ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸ್ಪೋಟಕ ಹೇಳಿಕೆ ಒಂದನ್ನು ನೀಡಿದ್ದಾರೆ.
ಈ ಹಿಂದೆ ಬಾಗೂರು ಗ್ರಾಮದ ಚನ್ನಕೇಶವ ದೇಗುಲಕ್ಕೆ ವೈಕುಂಠ ಏಕಾದಶಿ ದಿನ ದೇವರ ದರ್ಶನಕ್ಕಾಗಿ ನಾನು ಹೋಗಿದ್ದೆ. ಭೇಟಿ ನೀಡಿದಾಗ ನಮ್ಮನ್ನ ದೇವಸ್ಥಾನದ ಗರ್ಭಗುಡಿಗೆ ಬಿಟ್ಟಿರಲಿಲ್ಲ. ಪ್ರಾಂಗಣದವರೆಗೆ ಶಾಂತವೀರಸ್ವಾಮೀಜಿ ಜೊತೆ ನಾನು ಹೋಗಿದ್ದೆ. ದೇವರ ದರ್ಶನಕ್ಕೆ ಹೋಗಿದ್ದ ನಮಗೆ ಪೂಜಾರಿಗಳು ನರಕ ತೋರಿಸಿದ್ರು.

ಪೂಜಾರಿಗೆ ಸೇರಿದ ಜಾತಿಯ ಮಹಿಳೆಯರನ್ನು ಬಿಟ್ರು, ನಮ್ಮನ್ನು ಬಿಡಲಿಲ್ಲ. ಕುರುಬ ಎಂಬ ಕಾರಣಕ್ಕೆ ನಮ್ಮನ್ನು ದೇವಸ್ಥಾನದ ಒಳಗೆ ಬಿಡಲಿಲ್ಲ. ನಾವು ದೇಗುಲಕ್ಕೆ ಹೋಗಿ ಬಂದ ಮೇಲೆ ಕುರುಬರ ಸ್ವಾಮೀಜಿ ಒಳಗೆ ಬಂದು ಮಲಿನ ಆಗಿದೆ ಅಂತಾ ದೇಗುಲವನ್ನೇ ಸ್ವಚ್ಛಗೊಳಿಸಿದ್ದರು.

ಹಾಗಾಗಿ ನಾವು ಚನ್ನಕೇಶವ ದೇಗುಲಕ್ಕೆ ನಾವು ಹೋಗಲ್ಲ ಎಂದು ನಿರ್ಧಾರ ತೆಗೆದುಕೊಂಡೆವು ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ. ಅದು ಮುಜರಾಯಿ ದೇಗುಲ ಎಂದು ಗೊತ್ತಿದ್ದರೆ ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಅಂದೇ ಪ್ರತಿಭಟಿಸುತ್ತಿದ್ದೆವು. ಆಗ ನಮಗೆ ಮುಜರಾಯಿ ದೇಗುಲ ಎಂಬುದು ತಿಳಿದಿರಲಿಲ್ಲ. ಎಂದು ಕನಕ ಪೀಠದ ಈಶ್ವರಾನಂದಪುರಿ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ – ಇನ್ಮುಂದೆ 1 ಕೆಜಿ ಅಕ್ಕಿಗೆ 29 ರೂಪಾಯಿ..!

Leave a Comment

DG Ad

RELATED LATEST NEWS

Top Headlines

ಬಂಧಿತ ಪುನೀತ್ ಕೆರೆಹಳ್ಳಿ ತೀವ್ರ ಅಸ್ವಸ್ಥ.. ಕೆಸಿ ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಮಾಡುತ್ತಿರೋ ಗಂಭೀರ ಆರೋಪ ಕೇಳಿ ಬಂದಿದ್ದು, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾಂಸದ ಬಾಕ್ಸ್‌ಗಳನ್ನು ತುಂಬಿರುವ ವಾಹನವನ್ನು ತಡೆದು ನಿನ್ನೆ

Live Cricket

Add Your Heading Text Here