18ನೇ ವಯಸ್ಸಿಗೆ ಮದುವೆಯಾಗಿ ಡಿವೋರ್ಸ್ ಪಡೆದ ಖ್ಯಾತ ಗಾಯಕಿ 43ನೇ ವಯಸ್ಸಿನಲ್ಲಿ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕಿ ಕನಿಕಾ ಕಪೂರ್ ಉದ್ಯಮಿ ಜೊತೆ ಎರಡನೇ ಮದುವೆಯಾಗಿದ್ದಾರೆ.
ಕನಿಕಾ ಕಪೂರ್ ಅವರು ಬೇಬಿ ಡಾಲ್ ಮತ್ತು ಚಿತಿಯಾ ಕಲೈಯಾ ವೆ ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 1988 ರಲ್ಲಿ ಕನಿಕಾ ಕಪೂರ್ 18ನೇ ವಯಸ್ಸಿನಲ್ಲಿ ರಾಜ್ ಚಂದ್ರಲೋಕ್ ಅವರನ್ನು ಮೊದಲು ವಿವಾಹವಾಗಿದ್ರು. 2012ರಲ್ಲಿ ಇಬ್ಬರೂ ವಿಚ್ಚೇದನ ಪಡೆದು ಬೇರ್ಪಟ್ಟರು. ಕನಿಕಾಗೆ 3 ಮಕ್ಕಳಿದ್ದು, ವಿಚ್ಛೇದನದ ಹಲವು ವರ್ಷಗಳ ನಂತರ ಅವರು ಮತ್ತೊಮ್ಮೆ ಮದುವೆಯಾಗಲು ನಿರ್ಧರಿಸಿದ್ರು.
2022 ರಲ್ಲಿ ಉದ್ಯಮಿ ಗೌತಮ್ ಹಾಥಿರಾಮನಿ ಅವ್ರನ್ನು ವಿವಾಹವಾದರು. ಇದರಿಂದಾಗಿ ಕನಿಕಾ ಕಪೂರ್ ಅವರು ಟ್ರೋಲ್ಗೆ ಗುರಿಯಾಗಿದ್ದರು. ಆದರೆ ಕನಿಕಾ ಕಪೂರ್ ಟ್ರೋಲ್ ಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಗಾಯಕಿ 2022 ರಲ್ಲಿ ಲಂಡನ್ ನಲ್ಲಿ 2ನೇ ಮದುವೆ ಮಾಡಿಕೊಂಡಿದ್ರು.
2014ರಲ್ಲಿ ಕನಿಕಾ ಕಪೂರ್ ಬಳಿ ಉದ್ಯಮಿ ಗೌತಮ್ ಅವರು ಮದುವೆ ಪ್ರಪೋಸ್ ಮಾಡಿದ್ರು. ಆದರೆ ಈ ಗಾಯಕಿ ನಟಿ ತಮಾಷೆ ಮಾಡುತ್ತಿದ್ದಾನೆ ಎಂದು ಮದುವೆ ಬಗ್ಗೆ ಚಿಂತೆ ಮಾಡಲಿಲ್ಲ. ಇದರ ನಂತರ 2020ರಲ್ಲಿ ಕನಿಕಾ ಕಪೂರ್ ಬಳಿ ಗೌತಮ್ ಮತ್ತೆ ಮದುವೆ ಬಗ್ಗೆ ಪ್ರಸ್ತಾಪಿಸಿದ್ರು. 2 ವರ್ಷಗಳ ನಂತರ ಅವರು ಮದುವೆಯಾದರು.
ಇದನ್ನೂ ಓದಿ : ಬಿಗ್ಬಾಸ್ ಮನೆಯಲ್ಲಿ ಆಟ ಉಲ್ಟಾಪಲ್ಟಾ – ರೊಚ್ಚಿಗೆದ್ದ ರಜತ್ ಆರ್ಭಟಕ್ಕೆ ಚೈತ್ರಾ ತತ್ತರ..!