ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಮಾಜಿ ಪ್ರಿಯತಮನಿಂದ ಚಾಕು ಇರಿತ.. ಘಟನೆ ಬಳಿಕ ಆರೋಪಿ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮ*ಹ*ತ್ಯೆಗೆ ಯತ್ನ..!

ವರ್ತೂರು ಮುಖ್ಯರಸ್ತೆಯ ರಾಮಗೊಂಡನಹಳ್ಳಿ ಬಳಿ ನಡೆದಿರುವ ಘಟನೆ.. ಕೋಲಾರ ಮೂಲದ ಯುವಕ ವೆಸ್ಟ್ ಬೆಂಗಾಲ್ ಮೂಲದ ಯುವತಿ.. ನವಾಜ್, (18) ಚಾಕು ಇರಿದ ಆರೋಪಿ.. ನಂದಿನಿ ದಾಸ್ (18) ಚಾಕು ಇರಿತಕ್ಕೆ ಒಳಗಾದ ಯುವತಿ..

ಇಬ್ಬರು ಸ್ಥಿತಿ ಗಂಭೀರ ಇಬ್ಬರನ್ನ ಪ್ರತ್ಯೇಕ ಆಸ್ಪತ್ರೆಗೆ ದಾಖಲು..ವರ್ತೂರು ಮೈನ್ ರೋಡ್ ಬಳಿ ನಡೆದ ಘಟನೆ.. ಇಬ್ಬರಿಗೂ ಕಳೆದ ಮೂರು ವರ್ಷಗಳಿಂದ ಪರಿಚಯ ಇತ್ತು.. ಇಬ್ಬರೂ ಕೂಡ ಪ್ರೀತಿಯಲ್ಲಿದ್ರು.. ಆದ್ರೆ ಯುವತಿಯ ಮನೆಯಲ್ಲಿ ಇಬ್ಬರ ಪ್ರೀತಿಗೆ ಒಪ್ಪಿಗೆ ನೀಡಿರಲಿಲ್ಲ.. ಹೀಗಾಗಿ ಬೇರೊಬ್ಬನ ಜೊತೆ ಯುವತಿಯ ಮದುವೆಗೆ ಪ್ಲಾನ್ ನಡೆಸಿದ್ದ ಕುಟುಂಬಸ್ಥರು..

ಈ ವಿಚಾರ ಗೊತ್ತಾಗಿ ಯಾರು ಇಲ್ಲದ ವೇಳೆ ಯುವತಿ ಮನೆಗೆ ಬಂದಿದ್ದ ಆರೋಪಿ ಬಂಡೆ ನವಾಜ್.. ಚಾಕು ಸಮೇತ ಮನೆಗೆ ಎಂಟ್ರಿ ಕೊಟ್ಟಿದ್ದ.. ಈ‌ ವೇಳೆ ಬೇರೆಯವರನ್ನ ಮದುವೆಯಾಗಬೇಡ ಎಂದು ಜಗಳ ತೆಗೆದಿದ್ದ.. ಮನೆಯಲ್ಲಿ ಒಪ್ಪಲ್ಲ , ಮನೆಯವರು ಹೇಳಿದಂತೆ ಕೇಳ್ತೇನೆ ಎಂದಿದ್ದ ಯುವತಿ.. ಈ ವೇಳೆ ಯುವತಿಗೆ ಚಾಕು ಇರಿದಿರುವ ಆರೋಪಿ.. ಕುತ್ತಿಗೆ, ಕೈ, ತೊಡೆ ಸೇರಿ ಹಲವು ಭಾಗಗಳಿಗೆ ಇರಿತ.. ನಂತರ ತಾನೂ ಚಾಕು ಇರಿದುಕೊಂಡು ಆತ್ಮ*ಹ*ತ್ಯೆಗೆ ಮುಂದಾಗಿದ್ದ.. ಇಬ್ಬರೂ ರಕ್ತದ ಮಡುವಲ್ಲಿ ಒದ್ದಾಡ್ತಿದ್ರು.. ಕಿರುಚಾಟ ಕಂಡು ಪೊಲೀಸ್ರಿಗೆ ಮಾಹಿತಿ ನೀಡಿದ್ದ ಸ್ಥಳೀಯರು.. ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ..

ಸದ್ಯ ಯುವತಿ ನಂದಿನಿ ದಾಸ್ ಪರಿಸ್ಥಿತಿ ಗಂಭೀರ.. ಐಸಿಯುನಲ್ಲಿ ನಂದಿನಿ ದಾಸ್ ಗೆ ಚಿಕಿತ್ಸೆ.. ಆರೋಪಿಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ.. ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿರುವ ವರ್ತೂರು ಠಾಣೆ ಪೊಲೀಸ್ರು..!

Btv Kannada
Author: Btv Kannada

Leave a Comment

Read More