ಜೂ.17 ರಂದು ಮೋದಿ – ಟ್ರಂಪ್‌ ದ್ವಿಪಕ್ಷೀಯ ಸಭೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್‌ನಲ್ಲಿ ನಡೆಯಲಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಜೂನ್ 17 ರಂದು ಮಹತ್ವದ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಶ್ವೇತಭವನವು ಈ ಭೇಟಿಯನ್ನು ಅಧಿಕೃತವಾಗಿ ಖಚಿತಪಡಿಸಿದೆ. 2025 ರ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನಲ್ಲಿ ಭೇಟಿಯಾದ ನಂತರ ಉಭಯ ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಮಾತುಕತೆ ಇದಾಗಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ (Modi) ಅವರು ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೈಲಿಗಲ್ಲು ತಲುಪಿದ್ದಕ್ಕೆ ಟ್ರಂಪ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಈ ಹೈ-ವೋಲ್ಟೇಜ್ ಸಭೆ ನಿಗದಿಯಾಗಿದೆ.

ಫ್ರಾನ್ಸ್‌ನ ಎವಿಯನ್ ನಗರದಲ್ಲಿ ಜೂನ್ 16 ಮತ್ತು 17 ರಂದು ಜಿ7 ಶೃಂಗಸಭೆ ನಡೆಯಲಿದೆ. ಈ ಭೇಟಿಯ ವೇಳೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದವನ್ನು (BTA) ವೇಗಗೊಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಅಮೆರಿಕವು ಭಾರತದ ಮೇಲಿನ ರಷ್ಯಾ ತೈಲ ಆಮದು ಸೇರಿದಂತೆ ಕೆಲವು ವಿಷಯಗಳಿಗಾಗಿ ವಿಧಿಸಿರುವ ಹೆಚ್ಚುವರಿ ಸುಂಕಗಳ ಬಗ್ಗೆ ಮಾತುಕತೆ ನಡೆಯಬಹುದು. ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರ ಹಿತದೃಷ್ಟಿಯಿಂದ ವೀಸಾ ನಿಯಮಗಳ ಸಡಿಲಿಕೆ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಪೊಲೀಸರಿಂದ ಹೈಕೋರ್ಟ್ ಮಾರ್ಗಸೂಚಿ ಉಲ್ಲಂಘನೆ – ಸೈಲೆಂಟ್‌ ಸುನೀಲ್‌ ಸೇರಿ 66 ಮಂದಿಗೆ ರೌಡಿಶೀಟ್‌ನಿಂದ ಮುಕ್ತಿ!

Btv Kannada
Author: Btv Kannada

Leave a Comment

Read More