ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ!

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಅದರ ಪರಿಣಾಮವಾಗಿ ಫಿಲಿಪೈನ್ಸ್ ಸೇರಿದಂತೆ ಹಲವು ಪೆಸಿಫಿಕ್ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ. ಕೂಡಲೇ ಅಲ್ಲಿನ ಕರಾವಳಿ ಭಾಗದ ಜನರನ್ನು ಸ್ಥಳಾಂತರವಾಗುವಂತೆ ಒತ್ತಾಯಿಸಲಾಗಿದ್ದು, ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಇಂದು ಬೆಳಿಗ್ಗೆ 7:37ಕ್ಕೆ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ದಕ್ಷಿಣ ಫಿಲಿಪೈನ್ಸ್‌ ಮಿಂಡನಾವೋ ದ್ವೀಪದ ಜನರಲ್ ಸ್ಯಾಂಟೋಸ್ ನಗರದ ಸಮೀಪದಲ್ಲಿ ಕೇಂದ್ರ ಬಿಂದುವಿದೆ ಎಂದು ರಿಕ್ಟರ್ ಮಾಪಕದಲ್ಲಿ ತೋರಿಸಿದೆ.

ಭೂಕಂಪದಿಂದಾಗಿ ಸುಮಾರು 7 ಲಕ್ಷ ಜನಸಂಖ್ಯೆ ಹೊಂದಿರುವ ಜನರಲ್ ಸ್ಯಾಂಟೋಸ್ ನಗರದಲ್ಲಿ ಸಂಪೂರ್ಣ ಕತ್ತಲಲ್ಲಿ ಆವರಿಸಿದೆ. ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜೊತೆಗೆ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವೊಂದು ಭಾಗಶಃ ಕುಸಿದಿದೆ. ಕಚೇರಿ ಸಮಯ ಆರಂಭಕ್ಕೂ ಮುನ್ನವೇ ಭೂಕಂಪ ಸಂಭವಿಸಿದ್ದರಿಂದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫಿಲಿಪೈನ್ಸ್‌ ಭೂಕಂಪದ ಪರಿಣಾಮ ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದ್ದು, ಈಗಾಗಲೇ ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಈಗಾಗಲೇ 18 ಸೆ.ಮೀ ಎತ್ತರದ ಅಲೆಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ : ಹೊಸ ಪ್ರತಿಭೆಗಳ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಅನಾವರಣ!

Btv Kannada
Author: Btv Kannada

Leave a Comment

Read More