ಬೆಂಗಳೂರು : ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ 6 ಮಂದಿ ಹಿರಿಯ ವಕೀಲರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ನಿನ್ನೆ ನಡೆದ ಮಹತ್ವದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ಹಿರಿಯ ವಕೀಲ ಹಾಗೂ ಹಾಲಿ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಗಿರುವ ಹೊಂಬೇಗೌಡ ಶಾಂತಿ ಭೂಷಣ್ ಸೇರಿದಂತೆ 6 ಮಂದಿ ಕರ್ನಾಟಕದ ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.

ಹಿರಿಯ ವಕೀಲರಾದ ಹೊಂಬೇಗೌಡ ಶಾಂತಿ ಭೂಷಣ್, ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ಹೇಮಾ ಕುಲಕರ್ಣಿ, ಸುಬ್ರಮಣ್ಯ ರಂಗರಾವ್, ತದಗವದಿ ಪ್ರಕಾಶ್ ವಿವೇಕಾನಂದ ಮತ್ತು ಬಕ್ಕೇಶ್ವರ್ ಪ್ರಮೋದ್ ಅವರನ್ನು ಹೈಕೋರ್ಟ್ನ ನ್ಯಾಯಮೂರ್ತಿಗಳಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಪರಮೇಶ್ವರ್ಗೆ ಮಾತ್ರ ಡಿಸಿಎಂ ಸ್ಥಾನ!
Author: Btv Kannada
Post Views: 523









