ಹಿರಿಯ ವಕೀಲ ಶಾಂತಿ ಭೂಷಣ್ ಸೇರಿ 6 ಮಂದಿ ಹೈಕೋರ್ಟ್​ನ ನ್ಯಾಯಮೂರ್ತಿಗಳಾಗಿ ನೇಮಕ!

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ 6 ಮಂದಿ ಹಿರಿಯ ವಕೀಲರನ್ನು ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ನಿನ್ನೆ ನಡೆದ ಮಹತ್ವದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ಹಿರಿಯ ವಕೀಲ ಹಾಗೂ ಹಾಲಿ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಆಗಿರುವ ಹೊಂಬೇಗೌಡ ಶಾಂತಿ ಭೂಷಣ್ ಸೇರಿದಂತೆ 6 ಮಂದಿ ಕರ್ನಾಟಕದ ಹೈಕೋರ್ಟ್​ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.

ಹಿರಿಯ ವಕೀಲರಾದ ಹೊಂಬೇಗೌಡ ಶಾಂತಿ ಭೂಷಣ್, ರಾಘವೇಂದ್ರ ಸೀತಾರಾಮ್ ಶ್ರೀವತ್ಸ, ಹೇಮಾ ಕುಲಕರ್ಣಿ, ಸುಬ್ರಮಣ್ಯ ರಂಗರಾವ್, ತದಗವದಿ ಪ್ರಕಾಶ್ ವಿವೇಕಾನಂದ ಮತ್ತು ಬಕ್ಕೇಶ್ವರ್ ಪ್ರಮೋದ್ ಅವರನ್ನು ಹೈಕೋರ್ಟ್​ನ ನ್ಯಾಯಮೂರ್ತಿಗಳಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಪರಮೇಶ್ವರ್​ಗೆ ಮಾತ್ರ ಡಿಸಿಎಂ ಸ್ಥಾನ!

Btv Kannada
Author: Btv Kannada

Leave a Comment

Read More