ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೆಟ್ರೋಲ್ ವಿಚಾರವಾಗಿ ರಾಜಕಾರಣ ಮಾಡ್ತಿದ್ದಾರೆ. ದೇಶದ ಕ್ಯಾಪಿಟಲ್ಗಿಂತ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿಯಾಗಿದೆ, 60ಕ್ಕೂ ಹೆಚ್ಚು ರಾಷ್ಟ್ರಗಳು ಪೆಟ್ರೋಲ್ನ ಕಡಿಮೆ ಬಳಸಿ ಎಂದು ಆದೇಶ ಹೊರಡಿಸಿದೆ. ಸಿದ್ದರಾಮಯ್ಯನವರಿಗೆ ಜ್ಞಾನ ಇದ್ರೆ ವ್ಯಾಟ್ ಕಡಿಮೆ ಮಾಡಬೇಕಿತ್ತು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಆರ್. ಅಶೋಕ್ ಮಾತನಾಡಿ, ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಲಾಭ ಬರುವುದಿಲ್ಲ, ಇದರಿಂದ ರಾಜ್ಯ ಸರ್ಕಾರಕ್ಕೆ ಲಾಭ. ಕೇಂದ್ರ ಸರ್ಕಾರಕ್ಕೆ ಇದರಿಂದ ನಯಾ ಪೈಸಾನೂ ಬರಲ್ಲ. ಸುರ್ಜೇವಾಲ ಅವರೆಲ್ಲಾ ಏನ್ ಮಾಡೋಕೆ ಬಂದಿದ್ದಾರೆ. ನಾನು ಕಾಂಗ್ರೆಸ್ನವರಿಗೆ ಸವಾಲ್ ಹಾಕ್ತೀನಿ. ಬೆಲೆ ಏರಿಕೆಯಿಂದ ನಮಗೆ ಟ್ಯಾಕ್ಸ್ ಬರಲ್ಲ ಅಂತ ಹೇಳಿ ಮೇ.30ಕ್ಕೆ ದೊಡ್ಡ ಬೋಗಸ್ ಹೋರಾಟ ಮಾಡ್ತೀವಿ. ಇವತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ಯಾರಿಗೆ ಲಾಭ ಅನ್ನೋದನ್ನು ಹೇಳಲಿ, ಕೇಂದ್ರ ಸರ್ಕಾರಕ್ಕೆ ಯಾವುದೇ ತೆರಿಗೆ ಬರಲ್ಲ ಎಂದಿದ್ದಾರೆ.
ಇದೇ ವೇಳೆ ಭಟ್ಕಳದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಮಾತನಾಡಿ, ಪೊಲೀಸರು ಕೈ ಕಟ್ಟಿ ಕೂತ್ಕೊಂಡಿದ್ದಾರೆ. ಮುಸ್ಲಿಂಮರು ಟೋಪಿ ಹಾಕಿರೋ ಸಿದ್ದರಾಮಯ್ಯ ಇರೋವರೆಗೂ ನಮ್ಮನ್ನ ಯಾರು ಏನು ಮಾಡಕ್ಕಾಗಲ್ಲ ಅಂತ್ಕೊಂಡಿದ್ದಾರೆ. ಇಲ್ಲಿಯವರೆಗೂ ಹಲ್ಲೆ ಮಾಡಿದವರ ವಿರುದ್ಧ ಕ್ರಮ ತಗೆದುಕೊಂಡಿಲ್ಲ, ಪೊಲೀಸರ ಮೇಲೆ ಕೈ ಮಾಡಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

ಇನ್ನು ಕಾಕ್ರೋಚ್ ಪಾರ್ಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಜಿರಳೆ ಪಕ್ಷ, ಪಾಕಿಸ್ತಾನದ ಕೈವಾಡ ಇದೆ. ಅದಕ್ಕೆ ಕಾಂಗ್ರೆಸ್ನವರು ಯಾರು ಯಾರು ಕಾಮೆಂಟ್ ಮಾಡಿದ್ದಾರೆ ಈತರ ಟ್ಯೂಲ್ ಕಿಟ್ ಮಾಡೋರೇ ದೇಶದ ವಿರೋಧಿಗಳು. ಕಾಂಗ್ರೆಸ್ ಎಷ್ಟು ಲೂಟಿ ಮಾಡಿದೆ ಫಸ್ಟ್ ಹೇಳಲಿ. ಕೇಂದ್ರ ಸರ್ಕಾರ ಸಾಲ ಮಾಡಿರೋ ಹಣವನ್ನು 90% ಅಭಿವೃದ್ಧಿಗೆ ಮಾಡಿದ್ದೇವೆ, ಇವತ್ತು ದೇಶ ಮೊದಲ ಬಾರಿಗೆ ರಫ್ತು ಮಾಡ್ತಿದೆ. ಅದೇ ರೀತಿ ನಿರ್ಮಲಾ ಸೀತಾರಾಮ್ ಅವರು 40% GST ಕಡಿಮೆ ಮಾಡಿದ್ರು, ಕಾಂಗ್ರೆಸ್ ನವರು ಅದುನ್ನ ಜಾಸ್ತಿ ಮಾಡೋಕೆ ನೋಡ್ತಿದ್ದಾರೆ ಎಂದಿದ್ದಾರೆ.
GST 60 ಸಾವಿರ ಕೋಟಿ ಜಾಸ್ತಿ ಆಗುತ್ತೆ, ಸಿದ್ದರಾಮಯ್ಯ ನವರ ಟ್ಯಾಕ್ಸ್ನ ಅವತಾರ ಇದು. ಸಿದ್ದರಾಮಯ್ಯನವರನ್ನ ಒಬ್ಬರೇ ಕರೆದಿದ್ದಾರೆ ಡೆಲ್ಲಿಗೆ. ಜಾರ್ಜ್ ಅವರು ಭೈರತಿ ಇನ್ನೂ ಮುಂತಾದವರು ಹೋಗ್ತಾ ಇದ್ದಾರೆ. ಡಿಕೆ ಶಿವಕುಮಾರ್ ಬೆವರು ಸುರಿಸಿ ಈ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ ಅಂತ ಹೇಳ್ತಾರೆ. ನಾಳೆ ತಗೋಂತಿನಿ ಪ್ಲೆಕ್ಸ್ ರೆಡಿ ಮಾಡ್ಕೊಳಿ ಅಂತ ಹೇಳ್ತಾರೆ, ಏನು ಕೊಟ್ಟಿಲ್ಲ ಅಂದ್ರೆ ಕಿತ್ಕೊಂತಿನಿ ಅಂತ ಹೇಳಿದ್ರು. ಮೊನ್ನೆ ಸರ್ವೇನಲ್ಲಿ ತಮಿಳುನಾಡಲ್ಲಿ ಡಿಎಂಕೆ ಬರುತ್ತೆ ಅಂತ ಹೇಳಿದ್ರು, ಅದಕ್ಕೆ ಫಸ್ಟ್ ನಿನ್ನ ಭವಿಷ್ಯ ನೋಡಿಕೊಳ್ಳಪ್ಪಾ ಡಿಕೆಶಿ. ಮುಖ್ಯಮಂತ್ರಿ ಏನು ಖಾಲಿ ಮಾಡೋ ತರ ಇಲ್ಲಾ, ಖಾಲಿ ತಟ್ಟೆಯನ್ನು ಡಿಕೆಶಿಗೆ ಕೊಡ್ತಾರೆ ಎಂದು ಆರ್. ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಇದೇ ವೇಳೆ ಗೃಹಜ್ಯೋತಿ, ಗೃಹಲಕ್ಷ್ಮಿ ವಿಚಾರ ಮಾತನಾಡಿ, ಸರ್ಕಾರಕ್ಕೆ ಸರಿಯಾಗಿ ರೇಷನ್ ಕೊಡೋಕೆ ಆಗ್ತಿಲ್ಲ. ಬ್ಯಾರೆಕ್ಷನ್ ಕೊಟ್ಟಿದ್ದಾರೆ. ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡೋಕಾಗ್ತಿಲ್ಲ. ಮಹಿಳೆಯರಿಗೆ 2000 ಕೊಡ್ತಿದ್ದಾರೆ, 700 ಕೋಟಿ ಹಣ ಆಹಾರ ಇಲಾಖೆಯದ್ದು ಹಣ ಕಟ್ ಮಾಡಿದ್ದಾರೆ. ಕೇಂದ್ರದ ಅಕ್ಕಿ ಕೊಡ್ತಿರೋದು, ಕಸ ವಿಲೇವಾರಿ ಮಾಡುವವರಿಗೆ ಹಣ ಬಿಡುಗಡೆ ಮಾಡ್ತಿಲ್ಲ. ಕಸ ತಗೆಯೋ ಲಾರಿಗೂ ಹಣ ನೀಡಿಲ್ಲ. ಸರ್ಕಾರ ಪೈನಾನ್ಸ್ ಡಿಪಾರ್ಟ್ಮೆಂಟ್ನ ಕಸ ಗುಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ದಿವಾಳಿ ಆದಂತಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಘೋಷಣೆ!









