ಬೆಂಗಳೂರು : ಬೆಂಗಳೂರಿನ ವೃದ್ಧೆಯೊಬ್ಬರಿಗೆ ಸೈಬರ್ ವಂಚಕರು ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ 24 ಕೋಟಿ ರೂ. ದೋಚಿರುವ ಘಟನೆ ನಡೆದಿದೆ. ಇದೀಗ ಕೋಟಿ ಕೋಟಿ ರೂ. ಸುಲಿಗೆ ಮಾಡಿದ ಐವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ರಾಮಮೂರ್ತಿಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಪ್ರಾಪರ್ಟಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇ.ವರೆಗೆ ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಬರೋಬ್ಬರಿ 24 ಕೋಟಿ ಸೈಬರ್ ವಂಚಕರ ಪಾಲಾಗಿದೆ.
24 ಕೋಟಿ ಕೊಟ್ಟರೂ ಇನ್ನೂ ಹಣ ಕೊಡಬೇಕು ಎಂದು ವಂಚಕರು ತಾಕೀತು ಮಾಡಿಕೊಂಡಿದ್ದರು. ಹೀಗಾಗಿ ವೃದ್ಧೆ ಮನೆಯಲ್ಲಿದ್ದ 1.30 ಕೆಜಿ ಚಿನ್ನದ ಒಡೆವೆ ಅಡ ಇಡಲು ಬ್ಯಾಂಕ್‌ಗೆ ಬಂದಿದ್ದರು. ಅಡ ಇಟ್ಟು ಹಣವನ್ನ ವಂಚಕರಿಗೆ ನೀಡಲು ಬಂದಿದ್ದರು. ಇದನ್ನು ಗಮನಿಸಿದ್ದ ಕಂಟೋನ್ಮೆಂಟ್ ಬ್ರಾಂಚ್ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್ – ಸಬ್ ಇನ್ಸ್ಪೆಕ್ಟರ್ ಸೇರಿ 6 ಮಂದಿ ಪೊಲೀಸರು ಸಸ್ಪೆಂಡ್!








