ಮೈಸೂರು : ಜನರ ಕಷ್ಟಗಳನ್ನು ಆಲಿಸಿ, ಪರಿಹಾರ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಹಶೀಲ್ದಾರ್ ಒಬ್ಬರ ಉಡಾಫೆ ಮಾತುಗಳಿಂದ ಜನರು ಹೈರಾಣಾಗಿದ್ದಾರೆ. ಮೈಸೂರಿನ ನಂಜನಗೂಡು ತಾಲೂಕು ತಹಶೀಲ್ದಾರ್ ಡಾ. ಸ್ಮಿತಾ ರಾಮು ಬಳಿ ಯಾರೇ ಬರಲಿ, ಯಾವುದೇ ಸಮಸ್ಯೆ ಹೇಳಿದ್ರೂ ‘ನನ್ನ ಹತ್ರ ಯಾಕೆ ಬಂದಿದ್ದೀರಿ? ಹೋಗಿ ವಿಎ, ಆರ್‌ಐ ಬಳಿ ಹೋಗಿ’.. ಪದೇ ಪದೇ ಕಚೇರಿಗೆ ಬಂದ್ರೆ, ನಿಮ್ಮ ಮೇಲೆ ಕೇಸ್ ಹಾಕಿಸಿಬಿಡ್ತೀನಿ ಗೊತ್ತಾಯ್ತಾ..! ಎಂದು ಧಮ್ಕಿ ಹಾಕುತ್ತಾರೆ.
ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರ ಸಿಡಿಮಿಡಿ ಮಾತಿನಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಡಾ. ಸ್ಮಿತಾ ರಾಮು ಅವರು ನಂಜನಗೂಡು ತಾಲೂಕಿಗೆ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡು ಕೇವಲ ಮೂರು ತಿಂಗಳು ಕಳೆಯುತ್ತಿದೆಯಷ್ಟೆ. ಆದರೆ, ಅಷ್ಟರಲ್ಲೇ ಅವರು ಸಾರ್ವಜನಿಕರು ಹಾಗೂ ರೈತರ ತೀವ್ರ ವಿರೋಧವನ್ನು ಕಟ್ಟಿಕೊಂಡಿದ್ದಾರೆ.
ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿಸುವ ಬದಲು, ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಹಶೀಲ್ದಾರ್ ಅವರ ಈ ವರ್ತನೆಯನ್ನು ಖಂಡಿಸಿ ಈಗಾಗಲೇ ಸ್ಥಳೀಯ ರೈತ ಸಂಘಟನೆಗಳು ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ : ದೇಶದ 51 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ!









