ಜೆಡಿಎಸ್ ನಾಯಕನಿಗೆ ಹನಿಟ್ರ್ಯಾಪ್ ಮಾಡುತ್ತಿದ್ದಾರಾ ಗುಬ್ಬಿ ಎಂಎಲ್ಎ ಶ್ರೀನಿವಾಸ್?

ತುಮಕೂರು : ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್‌ ಶ್ರೀನಿವಾಸ್ ಹಾಗೂ ಅವರ ಪುತ್ರ ದುಷ್ಯಂತ್​ ವಿರುದ್ಧ ಜೆಡಿಎಸ್ ನಾಯಕನಿಗೆ ಹನಿಟ್ರ್ಯಾಪ್ ಮಾಡ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಜೆಡಿಎಸ್ ನಾಯಕ ಸಿ.ಎಸ್.ಪುರ ನಾಗರಾಜ್ ಅವರನ್ನು ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸುವ ತಂತ್ರ ನಡೀತಿದೆ ಎಂಬ ಆರೋಪವಿದೆ.

ಜೆಡಿಎಸ್ ನಾಯಕ ಸಿ.ಎಸ್.ಪುರ ನಾಗರಾಜ್ ಅವರೇ ಖುದ್ದು ಸುದ್ದಿಗೋಷ್ಠಿ ನಡೆಸಿ ಈ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಿ.ಎಸ್.ಪುರ ನಾಗರಾಜ್ ಮಾತನಾಡಿ, ಶ್ರೀನಿವಾಸ್ ಪುತ್ರ ದುಷ್ಯಂತ್ ನನ್ನ ಚಾಲಕ ಸಂತೋಷ್ ಹಾಗೂ ಆಪ್ತ ಸಹಾಯಕ ಚಂದು ಅವರನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದಾರೆ. ಹಣದ ಆಮಿಷ ಒಡ್ಡಿ ನನ್ನ ಚಲನ ವಲನ ತಿಳಿದು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಂದ ಆಪರೇಷನ್ ಚಾಲಕ, ಡ್ರೈವರ್ ನಡೀತಿದೆ. ಬೆಂಗಳೂರಿನಲ್ಲಿರುವ ಶ್ರೀನಿವಾಸ್ ಅವರ ಫ್ಲ್ಯಾಟ್​ನಲ್ಲಿ ಚಾಲಕನನ್ನು ಕರೆದು ಕುತಂತ್ರ ನಡೆಸುತ್ತಿದ್ದಾರೆ. ನಾಗರಾಜ್​ದು ಅಕ್ರಮ ಸಂಬಂಧ ಇದೇಯಾ…ಇದ್ರೆ ಸಿ.ಡಿ. ಮಾಡಿ ಕೊಡಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಲೊಕೇಷನ್ ಪಡೆದುಕೊಂಡು ನನ್ನ ಚಲನ ವಲನದ ಮೇಲೆ ಗೂಢಾಚಾರಿಕೆ ನಡೆಸುತ್ತಿದ್ದಾರೆ. ನಾನು ಎಸ್ ಆರ್ ಶ್ರೀನಿವಾಸ್​ಗೆ ಪ್ರಬಲ ಎದುರಾಳಿ, ಹಾಗಾಗಿ ಮುಂದಿನ ಚುನಾವಣೆ ಎದುರಿಸಲು ಈಗಲೇ ಕುತಂತ್ರ ಮಾಡುತ್ತಿದ್ದಾರೆ. ವ್ಯವಹಾರದಲ್ಲಿ ಕಟ್ಟಿ ಹಾಕಿ, ಬಿಸಿನೆಸ್​ನಲ್ಲಿ ಲಾಸ್ ಮಾಡಿಸಿ ಪಾಪರ್ ಮಾಡಬೇಕು ಅಂತಾ ನೀವು ನನ್ನನ್ನು ಬೀದಿಲಿ ನಿಲ್ಲಿಸಿದರೆ,‌ ನಾನು ನಿಮ್ಮನ್ನು ಬಾಗಿಲಲ್ಲಾದರೂ ನಿಲ್ಲಿಸ್ತೀನಿ ಎಂದಿದ್ದಾರೆ.

ಈ ರೀತಿ ವಾಮ ಮಾರ್ಗದಲ್ಲಿ ರಾಜಕಾರಣ ಮಾಡಬಾರದು, ನಾಗರಾಜ್​ಗೆ ಏನು ಅಕ್ರಮ ಸಂಬಂಧ ಇದ್ಯಾ.. ಅವರ ಸಿಡಿ ಮಾಡಿ ಕೊಡು ಎಂದು ಆಮಿಷ ಒಡ್ಡುತ್ತಿದ್ದಾರೆ. ವ್ಯವಹಾರದಲ್ಲಿ ಕಟ್ಟಿ ಹಾಕಿ, ಬಿಸಿನೆಸ್​ನಲ್ಲಿ ಲಾಸ್ ಮಾಡಿಸಿ
ಪಾಪರ್ ಮಾಡೋದು ಅವರ ಹುನ್ನಾರ ಎಂದು ಸಿ.ಎಸ್.ಪುರ ನಾಗರಾಜ್ ಹೇಳಿದ್ದಾರೆ.

ನನ್ನ ಲೊಕೇಷನ್ ತಗೋತಾರೆ, ನಾನು ಮನೆ ಕಟ್ಟೋದನ್ನು ನಿಲ್ಲಿಸಲು ಹೊರಟಿದ್ದಾರೆ. ಆದರೆ ನಾನು ಗುಡಿಸಲು ಕಟ್ಟಿಕೊಂಡು ರಾಜಕಾರಣ ಮಾಡ್ತೀನಿ ಎಂದು ಸಿ.ಎಸ್.ಪುರ ನಾಗರಾಜ್ ವಾಗ್ಧಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ – 82 ಜನ ಸಾವು!

Btv Kannada
Author: Btv Kannada

Leave a Comment

Read More