ಕಠ್ಮಂಡು : ಮೌಂಟ್ ಎವರೆಸ್ಟ್ ಶಿಖರ ಏರಿದ ಇಬ್ಬರು ಭಾರತೀಯ ಪರ್ವತಾರೋಹಿಗಳು ಕೆಳಗಿಳಿಯುವಾಗ ಮೃತಪಟ್ಟಿದ್ದಾರೆ. ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಎಂಬವರು ಮೃತಪಟ್ಟ ಪರ್ವತಾರೋಹಿಗಳು.
ಸಂದೀಪ್ ಅರೆ ಬುಧವಾರ ಹಾಗೂ ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ ಎವರೆಸ್ಟ್ ಶಿಖರ ತಲುಪಿದ್ದರು. ಆದರೆ ಶಿಖರದಿಂದ ಕೆಳಗಿಳಿಯುವ ವೇಳೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಗದರ್ಶಕರು ಅವರನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಪರ್ವತಾರೋಹಿ ಕ್ಯಾಂಪ್-2ರಲ್ಲಿ ಮೃತಪಟ್ಟಿದ್ದರೆ, ಮತ್ತೊಬ್ಬರು ಹಿಲರಿ ಸ್ಟೆಪ್ ಬಳಿ ಸಾವನ್ನಪ್ಪಿದ್ದಾರೆ. ಬುಧವಾರ ಒಟ್ಟು 274 ಪರ್ವತಾರೋಹಿಗಳು ಎವರೆಸ್ಟ್ ಶಿಖರ ಏರಿದ್ದು, ಒಂದೇ ದಿನದಲ್ಲಿ ದಾಖಲಾಗಿರುವ ಅತಿ ಹೆಚ್ಚು ಏರಿಕೆಯ ಹೊಸ ದಾಖಲೆ ನಿರ್ಮಾಣವಾಗಿತ್ತು. ಈ ತಂಡದಲ್ಲಿ ಸಂದೀಪ್ ಅರೆ ಸೇರಿದಂತೆ ಭಾರತದ ತುಳಸಿ ರೆಡ್ಡಿ ಪಾಲ್ಪುನೂರಿ ಹಾಗೂ ಅಜಯ್ ಪಾಲ್ ಸಿಂಗ್ ಧಲಿವಾಲ್ ಕೂಡ ಇದ್ದರು. ಇದರ ಬಳಿಕ ಗುರುವಾರ ಭಾರತದ ಲಕ್ಷ್ಮೀಕಾಂತ ಮಂಡಲ್ ಕೂಡ ಎವರೆಸ್ಟ್ ಶಿಖರ ತಲುಪಿದ್ದರು.
ಇದನ್ನೂ ಓದಿ : ದುನಿಯಾ ವಿಜಯ್ – ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ ನಾಳೆ Zee ಕನ್ನಡದಲ್ಲಿ!








