ಮುಖ್ಯಮಂತ್ರಿ ಸಚಿವಾಲಯದ ವಿಶೇಷ ಅಧಿಕಾರಿಯನ್ನಾಗಿ ಜ್ಯೋತಿಷಿ ರಾಧನ್ ಪಂಡಿತ್ ನೇಮಿಸಿದ ಸಿಎಂ ವಿಜಯ್!

ಚೆನ್ನೈ: ಜ್ಯೋತಿಷಿ ರಾಧನ್ ಪಂಡಿತ್ ಅವರನ್ನು ಮುಖ್ಯಮಂತ್ರಿ ಸಚಿವಾಲಯದ ವಿಶೇಷ ಅಧಿಕಾರಿಯನ್ನಾಗಿ ಸಿಎಂ ವಿಜಯ್ ನೇಮಿಸಿದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಅಪಾರ ಅನುಭವ ಹೊಂದಿರುವ ರಾಧನ್ ಪಂಡಿತ್, ವಿಜಯ್ ಅವರು ತಮಿಳುನಾಡಿನ ನಿರ್ಣಾಯಕ ರಾಜಕೀಯ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಈ ಹಿಂದೆಯೇ ಘೋಷಿಸಿದ್ದರು.

ಜ್ಯೋತಿಷಿ ರಾಧನ್ ಪಂಡಿತ್ ಅವರು ನುಡಿದಂತೆ ದಳಪತಿ ವಿಜಯ್ ಈಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ನಿಖರವಾಗಿ ಭವಿಷ್ಯ ಹೇಳಿ ಮುಖ್ಯಮಂತ್ರಿ ಮಾಡಿದ ತಮ್ಮ ಜ್ಯೋತಿಷಿ ರಾಧನ್ ಪಂಡಿತ್ ಅವರನ್ನು ಮುಖ್ಯಮಂತ್ರಿ ಸಚಿವಾಲಯದ ವಿಶೇಷ ಅಧಿಕಾರಿಯನ್ನಾಗಿ ಸಿಎಂ ವಿಜಯ್ ನೇಮಕ ಮಾಡಿದ್ದಾರೆ.

ಇದನ್ನೂ ಓದಿ : ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ – ಮೇ.3 ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು!

Btv Kannada
Author: Btv Kannada

Leave a Comment

Read More