ದಕ್ಷ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್​ ಮಹಮ್ಮದ್ ಆಲಿ ವರ್ಗಾವಣೆ – ಪ್ರಶಂಸೆ ವ್ಯಕ್ತಪಡಿಸಿದ MLA ಸುರೇಶ್ ಕುಮಾರ್!

ಬೆಂಗಳೂರು : ಕಳೆದ 2 ವರ್ಷಗಳಿಂದ ರಾಜಾಜಿನಗರ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ಉತ್ತಮ ಕಾರ್ಯ ನಿರ್ವಹಿಸಿರುವ ಮಹಮ್ಮದ್ ಆಲಿ ಅವರು ಇಂದು ವರ್ಗಾವಣೆಯಾಗಿದ್ದಾರೆ. ಇದೀಗ ಕಾಂಗ್ರೆಸ್ ವರ್ಗಾವಣೆ ಮಾಡಿದ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್​ ಮಹಮ್ಮದ್ ಆಲಿಗೆ ಬಿಜೆಪಿ ಎಂಎಲ್ಎ ಸುರೇಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಎಂಎಲ್ಎ ಸುರೇಶ್ ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಮಹಮ್ಮದ್ ಆಲಿ ಅವರು ಎಲ್ಲರೊಂದಿಗೆ ಅತ್ಯಂತ ಸೌಜನ್ಯಯುತ ನಡವಳಿಕೆಯಿಂದ ವರ್ತಿಸಿ, ಈ ಭಾಗದ ಯಾವುದೇ ಸಮಸ್ಯೆ ಬಂದಾಗ ಸ್ಪಂದಿಸಿದ ಅಧಿಕಾರಿ. ಇಂತಹ ದಕ್ಷ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಬೇಕು ಎಂದು ಕೊಂಡಾಡಿದ್ದಾರೆ.

ಇನ್ನು ವಿಶೇಷವಾಗಿ 18.11.2025 ಮಂಗಳವಾರದಂದು, ನನ್ನ ಅಪೇಕ್ಷೆಯಂತೆ, ನನಗೆ ಒಂದು ದಿನದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಆಗಿ ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಸಂಪೂರ್ಣ ಸಹಕರಿಸಿದ ಮಹಮದ್ ಆಲಿ ಅವರಿಗೆ ಸುರೇಶ್ ಕುಮಾರ್ ಧನ್ಯವಾದಗಳು ಸಲ್ಲಿಸಿದ್ದಾರೆ.

ಅಂದಿನದು ನನ್ನ ಜೀವನದ ವಿಶೇಷ ಅನುಭವದ ದಿನ, ಅವರ ಮುಂದಿನ ವೃತ್ತಿ ದಿನಗಳು ಶುಭಕರವಾಗಿರಲಿ ಎಂದು ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ಆಲಿ ಅವರಿಗೆ ಎಂಎಲ್ಎ ಸುರೇಶ್ ಕುಮಾರ್ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ : ನೀವು ಇತಿಹಾಸ ನಿರ್ಮಿಸಿದ್ದೀರಿ – ಕರೆ ಮಾಡಿ ಸಿಎಂ ವಿಜಯ್​ಗೆ ಅಭಿನಂದಿಸಿದ ಸಿದ್ದರಾಮಯ್ಯ!

Btv Kannada
Author: Btv Kannada

Leave a Comment

Read More