10 ಸಾವಿರ ಉಚಿತ ಟಿಕೆಟ್‌ ಬೇಡಿಕೆಯಿಂದಲೇ IPL ಫೈನಲ್‌ ಶಿಫ್ಟ್‌ – BCCI ಕಾರ್ಯದರ್ಶಿ ಸ್ಪಷ್ಟನೆ!

ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಗೊಂಡಿದೆ. ಇದಕ್ಕೆ ಶಾಸಕರಿಗೆ ಸೇರಿ 10 ಸಾವಿರ ಉಚಿತ ಟಿಕೆಟ್‌ ಬೇಡಿಕೆಯೇ ಮುಖ್ಯ ಕಾರಣ ಎಂದು BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ನಿಗದಿತ ಕೋಟಾಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಕೆಎಸ್‌ಸಿಎ ಪಟ್ಟು ಹಿಡಿದಿತ್ತು. ನಿಯಮ ಉಲ್ಲಂಘಿಸಿ ಹೆಚ್ಚಿನ ಟಿಕೆಟ್ ನೀಡಲು ಸಾಧ್ಯವಿಲ್ಲದ ಕಾರಣ ಬಿಸಿಸಿಐ ಅಂತಿಮವಾಗಿ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬದಲಾಯಿಸಲು ನಿರ್ಧರಿಸಲಾಯಿತು ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.

ಮೇ 2ರಂದು ಕೆಎಸ್‌ಸಿಎ ಕಳುಹಿಸಿದ ಇಮೇಲ್ ನೋಡಿ ನಾವು ಶಾಕ್‌ಗೆ ಒಳಗಾದೆವು. ಆ ಇಮೇಲ್‌ನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರಕ್ಕಾಗಿ (700 ಟಿಕೆಟ್‌ಗಳು) ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ಕೇಳಲಾಗಿತ್ತು ಎಂದು ತಿಳಿಸಿದರು.

ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ನೀಡಲು ಸಾಧ್ಯವಾಗದ ಕಾರಣ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯದಿಂದಾಗಿ (36 ಸಾವಿರ) ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ (1.30 ಲಕ್ಷ ಸಾಮರ್ಥ್ಯ) ಸ್ಥಳಾಂತರ ಮಾಡಿದೆ.

ಒಂದು ವೇಳೆ ನಾವು ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ನೀಡಿದ್ದರೆ, ಸಾಮಾನ್ಯ ಜನರಿಗೆ ಕೇವಲ ಕೆಲವು ಸಾವಿರ ಟಿಕೆಟ್‌ಗಳು ಮಾತ್ರ ಉಳಿಯುತ್ತಿದ್ದವು. ಇದು ಸುಪ್ರೀಂ ಕೋರ್ಟ್ ನಿರ್ದೇಶನಗಳ ನೇರ ಉಲ್ಲಂಘನೆಯಾಗುತ್ತಿತ್ತು ಎಂದು ಸೈಕಿಯಾ ಎಚ್ಚರಿಸಿದ್ದಾರೆ.

ಲೀಗ್ ಪಂದ್ಯಗಳಲ್ಲಿ ಕೆಲವು ರಿಯಾಯಿತಿ ಕೊಡಬಹುದು. ಆದರೆ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುತ್ತವೆ. ಅಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹೆಚ್ ವಿಶ್ವನಾಥ್!

Btv Kannada
Author: Btv Kannada

Leave a Comment

Read More